ರಾಜ್ಯಮಟ್ಟದ ತಾಂತ್ರಿಕ -ಸಾಂಸ್ಕೃತಿಕ ಹಬ್ಬ ‘ವರ್ಣೋತ್ಸವ’

Update: 2019-03-08 12:50 GMT

ಶಿರ್ವ, ಮಾ.8: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ತುಳುನಾಡ ಪರಂಪರೆ ಎಂಬ ಶೀರ್ಷಿಕೆಯೊಂದಿಗೆ ಹಮ್ಮಿಕೊಳ್ಳ ಲಾದ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ವರ್ಣೋತ್ಸವ- 2019’ನ್ನು ಉಡುಪಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾ.7ರಂದು ಉದ್ಘಾಟಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮೈಸೂರು ಶಶಿ ಎಕ್ಸ್‌ಪೋರ್ಟ್ ಪ್ರೈವೆಟ್ ಲಿಮಿಟೆಡ್‌ನ ಹಿರಿಯ ಕೈಗಾರಿಕಾ ಇಂಜಿನಿಯರ್ ನಿಹಾಲ್ ಶೆಟ್ಟಿ, ಬೆಂಗಳೂರು ಸ್ಯಾಪ್ ಲ್ಯಾಬ್ಸ್ ಇಂಡಿಯ ಪ್ರೈವೆಟ್ ಲಿಮಿಟೆಡ್‌ನ ಡೆವಲಪರ್ ಗಗ್ ಪ್ರಭು ಮುಖ್ಯ ಅತಿಥಿಗಳಾಗಿದ್ದರು.

ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಶುಭ ಹಾರೈಸಿದರು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹು ಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಜ್ಯೋತಿ ಕಾಮತ್ ವಂದಿಸಿದರು. ಸೂರಜ್ ಶೇಟ್ ಮತ್ತು ರತ್ನಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News