×
Ad

ಉಡುಪಿ: ಕಾಂಗ್ರೆಸ್ ಬ್ಯಾನರ್‌ಗೆ ಹಾನಿ- ಎಸ್ಪಿಗೆ ದೂರು

Update: 2019-03-08 19:45 IST

ಉಡುಪಿ, ಮಾ.8: ಕಲ್ಸಂಕ ಜಂಕ್ಷನ್‌ನಲ್ಲಿ ಆಳವಡಿಸಲಾದ ಕಾಂಗ್ರೆಸ್ ಪಕ್ಷದ ಪರಿವರ್ತನಾ ಯಾತ್ರೆಯ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಎಸಗಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.10ರಂದು ನಗರದ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಬ್ಯಾನರನ್ನು ಕಲ್ಸಂಕ ಜಂಕ್ಷನ್‌ನಲ್ಲಿ ಹಾಕಲಾಗಿತ್ತು. ಮಾ. 7ರಂದು ರಾತ್ರಿ ವೇಳೆ ಕಿಡಿಗೇಡಿಗಳು ಬ್ಯಾನರ್‌ನಲ್ಲಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯ ಫೋಟೋ ವನ್ನು ಹರಿದು ಹಾನಿಗೊಳಿಸಿರುವುದು ಕಂಡುಬಂದಿದೆ.

ಈ ಕೃತ್ಯದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನ ಹಾಗೂ ನೋವಾಗಿದ್ದು, ಗುಂಪು ಘರ್ಷಣೆಗೆ ಅವಕಾಶ ಮಾಡಿದಂತಾಗುತ್ತದೆ. ಆದುದರಿಂದ ಬ್ಯಾನರ್ ಹಾನಿಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಇಂದು ಎಸ್ಪಿ ನಿಶಾ ಜೇಮ್ಸ್ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News