×
Ad

ಉಡುಪಿ: 16 ಕೋಟಿ ವೆಚ್ಚದ ಶಾಶ್ವತ ತಡೆಗೋಡೆ ಕಾಮಗಾರಿಗಳಿಗೆ ಚಾಲನೆ

Update: 2019-03-08 21:17 IST

ಉಡುಪಿ, ಮಾ.8: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದ್ರ ಕೊರೆತ ತಡೆಯಲು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಒಟ್ಟು 16 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾ.8 ರಂದು ಚಾಲನೆ ನೀಡಿದರು.

ಬಂದರು ಮತ್ತು ಮೀನುಗಾರಿಕೆ ಇಲಾಖೆ ಉಡುಪಿ ವಿಭಾಗ ವ್ಯಾಪ್ತಿಯ ಕಿದಿಯೂರು ಪಡುಕೆರೆ ಪ್ರದೇಶದಲ್ಲಿ 9 ಕೋಟಿ ರೂ., ತೆಂಕನಿಡಿಯೂರು ಗ್ರಾಮದ ಕಡಲ ತೀರದ ಪ. ವರ್ಗಗಳ ಹಾಗೂ ಮೀನುಗಾರರ ಕುಟುಂಬಗಳ ಮನೆಗಳ ಮುಂಭಾಗದಲ್ಲಿ 5 ಕೋಟಿ ಹಾಗೂ ಮಲ್ಪೆಕಡಲ ತೀರ ಮತ್ತು ಪುಟಾರ್ಡೊ ಗೆಸ್ಟ್ ಹೌಸ್ ಬಳಿ 2 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ವಡಭಾಂಡೇಶ್ವರ ವಾರ್ಡಿನ ನಗರಸಭಾ ಸದಸ್ಯರಾದ ಯೋಗೀಶ್ ಸಾಲ್ಯಾನ್, ಲಕ್ಷ್ಮೀ ಮಂಜು ಕೊಳ, ಎಡ್ಲಿನಾ ಕರ್ಕಡಾ, ಗ್ರಾಪಂ ಅಧ್ಯಕ್ಷರಾದ ಕೃಷ್ಣಯ್ಯ ಶೆಟ್ಟಿ, ಪ್ರಮೋದ್ ಪಡುಕೆರೆ, ಗುತ್ತಿಗೆದಾರ ಸತೀಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News