ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ ಮಹಿಳಾ ದಿನಾಚರಣೆ
Update: 2019-03-08 21:27 IST
ಮಂಗಳೂರು, ಮಾ.8: ನಗರದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಶುಕ್ರವಾರ ವಿಶಿಷ್ಟವಾಗಿ ಜರುಗಿತು.
ಮನಪಾದ ಕಸ ತ್ಯಾಜ್ಯವನ್ನು ನಿರ್ವಸುವ ಸೈಂಟ್ ಆ್ಯಂಟನಿ ಕಸ ಸಂಗ್ರಹಣೆ ಕಂಪನಿಯ ಎಂಟು ಮಹಿಳೆಯರನ್ನು ಚೆಂಡೆ ವಾದ್ಯದ ಮೂಲಕ ವಿದ್ಯಾರ್ಥಿಗಳು ವೇದಿಕೆಗೆ ಸ್ವಾಗತಿಸಿದರು. ಪ್ರಾಂಶುಪಾಲೆ ಭಗಿನಿ ಮೆಲಿಸ್ಸಾ, ಅಡಳಿತಾಧಿಕಾರಿ ಭಗಿನಿ ಕರಿಸ್ಸಿಮಾ, ಸಂಯೋಜಕಿ ಭಗಿನಿ ಮಾರಿ ಲೂಸಿ ಹಾಗೂ ಉಪ ಪ್ರಾಂಶುಪಾಲೆ ಭಗಿನಿ ಲಿಡ್ವಿನ್ ಈ ಮಹಿಳೆಯರನ್ನು ಶಾಲು ಹೊದಿಸಿ ಗೌರವಿಸಿದರು.
ಮಹಿಳಾ ದಿನಾಚರಣೆಯ ಮಹತ್ವವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು 7ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದರು.