ಮಹಿಳಾ ದಿನಾಚರಣೆಯ ಅಂಗವಾಗಿ ಗೃಹರಕ್ಷಕಿಗೆ ಸನ್ಮಾನ
Update: 2019-03-08 21:38 IST
ಮಂಗಳೂರು, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಗೃಹರಕ್ಷಕರ ವಾರದ ಕವಾಯತ್‌ನಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಮಂಗಳೂರು ಘಟಕದ ಗೃಹರಕ್ಷಕಿ ಸುಲೋಚನಾ ಅವರನ್ನು ಜಿಲ್ಲಾ ಕಮಾಡೆಂಟ್ ಡಾ. ಮುರಳಿ ಮೋಹನ ಚೂಂತಾರು ಹಾಗೂ ಜಿಲ್ಲಾ ಡೆಪ್ಯುಟಿ ಕಮಾಡೆಂಟ್ ರಮೇಶ್ ಫಲಪುಷ್ಪನೀಡಿ ಸನ್ಮಾನಿಸಿದರು.
ಕಳೆದ 6 ವರ್ಷಗಳಿಂದ ಜಿಲ್ಲಾ ಕಾರಾಗೃಹ, ಪೊಲೀಸ್ ಠಾಣೆ ಹಾಗೂ ಜಿಲ್ಲಾ ಕಚೇರಿಯಲ್ಲಿ ಕಂಪ್ಯೂಟರ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿರುವ ಸುಲೋಚನಾ ಅವರ ಸೇವೆಯ ಬಗ್ಗೆ ಜಿಲ್ಲಾ ಕಮಾಡೆಂಟ್ ಡಾ. ಮುರಳಿ ಮೋಹನ್ ಚೂಂತಾರು ಸ್ಮರಿಸಿದರು.
ಈ ವೇಳೆಗೆ ಡೆಪ್ಯುಟಿ ಕಮಾಡೆಂಟ್ ರಮೇಶ್, ಮಂಗಳೂರು ಘಟಕಾಧಿಕಾರಿ ಮಾರ್ಕ್‌ಶೇರ್, ಹಿರಿಯ ಗೃಹರಕ್ಷಕ ಸುರೇಶ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.