×
Ad

ಮಹಿಳೆಗೆ ಹಿಂಸೆ: ಪತಿಯ ವಿರುದ್ಧ ಮೊಕದ್ದಮೆ

Update: 2019-03-08 21:54 IST

ಮಣಿಪಾಲ, ಮಾ.8: ಆತ್ರಾಡಿಯಲ್ಲಿ ವಾಸವಾಗಿರುವ ಜಂಶೀನ (28) ಎಂಬವರಿಗೆ ಪತಿ ಕರಂಬಳ್ಳಿಯ ಮುಹಮ್ಮದ್ ಶರೀಫ್ ಅಲಿ ಹಾಗೂ ಅವರ ಮನೆಯವರು ದೈಹಿಕ ಹಿಂಸೆ ನೀಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು 2013ರ ಜನವರಿ ತಿಂಗಳಿನಲ್ಲಿ ಮದುವೆಯಾಗಿದ್ದು, ಈ ಸಮಯ ದಲ್ಲಿ ನೀಡಿದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮಾರಾಟ ಮಾಡಿ ತಾಯಿ ಮನೆಯಿಂದ ಹಣ ತರುವಂತೆ ದೈಹಿಕ ಹಿಂಸೆ ನೀಡುತ್ತಿದ್ದರು. ಇದೇ ರೀತಿ 6 ಲಕ್ಷ ರೂ.ವನ್ನು ತಾಯಿ ಮನೆಯಿಂದ ವಸೂಲಿ ಮಾಡಿದ್ದಾರೆ. ಅತ್ತೆ ಅಲೀಮಾಭಿ ಫೈನಾನ್ಸ್ಗಳಿಂದ ಜಂಶೀನರ ಹೆಸರಿನಲ್ಲಿ ಹಲವಾರು ಬಾರಿ ಸಾಲ ತೆಗೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2017ರ ಕೊನೆಯಲ್ಲಿ ಉಡುಪಿಯ ವಿಜಯಾ ಬ್ಯಾಂಕ್ನ ಚೆಕ್ಬುಕ್ನ ಹಲವಾರು ಹಾಳೆಗಳಿಗೆ ದೈಹಿಕವಾಗಿ ಹಿಂಸೆ ನೀಡಿ ಸಹಿ ಹಾಕಿಸಿಕೊಂಡಿದ್ದರು. ಇದರಲ್ಲಿ 3 ಚೆಕ್ಗಳನ್ನು ಯಾರಿಗೋ ನೀಡಿ ಬೌನ್ಸ್ ಮಾಡಿರುವುದು ತಿಳಿದು ಬಂತು. ಅಲ್ಲದೆ ನನ್ನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದರು. ಹೀಗೆ ಪತಿ, ಅತ್ತೆ ಅಲೀಮಾಭಿ ಹಾಗೂ ಮಾವ ಮೂಸ ಅಬ್ದುಲ್ ಖಾದರ್ ದೈಹಿಕ ಹಿಂಸೆ ನೀಡಿರುವುದಾಗಿ ಜಂಶೀನ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News