×
Ad

ಹೆಮ್ಮಾಡಿ ಒಂಟಿ ಮಹಿಳೆ ಕೊಲೆ: ಓರ್ವ ವಶಕ್ಕೆ

Update: 2019-03-08 21:55 IST

ಕುಂದಾಪುರ, ಮಾ.8: ಕಟ್ಬೇಲ್ತೂರು ಗ್ರಾಮದ ಹೆಮ್ಮಾಡಿ ಸಮೀಪದ ಹರೆಗೋಡು ನಿವಾಸಿ ಗುಲಾಬಿ ಮೊಗವೀರ (55) ಎಂಬವರನ್ನು ಕತ್ತು ಹಿಸುಕಿ ಉಸಿರು ಗಟ್ಟಿಸಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯನಾಗಿರುವ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಈ ಕೊಲೆ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕೊಲೆಗೆ ಬಡ್ಡಿ ವ್ಯವಹಾರವೇ ಕಾರಣ ಎಂಬುದು ತಿಳಿದುಬಂದಿದೆ. ಹಣ ಕೇಳಲು ಹೋದಾಗ ಈ ಕೊಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News