ಟ್ರಂಪ್ ಮಾಜಿ ಪ್ರಚಾರ ಮುಖ್ಯಸ್ಥನಿಗೆ 4 ವರ್ಷ ಜೈಲು

Update: 2019-03-08 16:27 GMT

ಅಲೆಕ್ಸಾಂಡ್ರಿಯ (ಅಮೆರಿಕ), ಮಾ. 8: ಯುಕ್ರೇನ್ ರಾಜಕಾರಣಿಗಳಿಗೆ ಸಲಹೆ ನೀಡುವ ಕೆಲಸಕ್ಕೆ ಸಂಬಂಧಿಸಿ ತೆರಿಗೆ ಮತ್ತು ಬ್ಯಾಂಕ್ ವಂಚನೆ ನಡೆಸಿದ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಚಾರ ಸಮಿತಿಯ ಮಾಜಿ ಅಧ್ಯಕ್ಷ ಪೌಲ್ ಮ್ಯಾನಫೋರ್ಟ್‌ಗೆ ನ್ಯಾಯಾಲಯವೊಂದು ಗುರುವಾರ 47 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಇದು ಟ್ರಂಪ್ ಅಭಿಯಾನದ ರಶ್ಯ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮಲ್ಲರ್ ವಿಚಾರಣೆಗೆ ಸಂಬಂಧಿಸಿದ ಸುದೀರ್ಘ ಶಿಕ್ಷೆಯಾಗಿದೆ. ಆದರೆ, ಶಿಕ್ಷೆ ವಿಧಿಸುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇದು ತುಂಬಾ ಕಡಿಮೆ ಶಿಕ್ಷೆಯಾಗಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ, 20 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕಾಗಿದೆ.

ಯುಕ್ರೇನ್‌ನಲ್ಲಿ ಮಾಡಿದ ಕೆಲಸದಿಂದ ಸಂಪಾದಿಸಿದ ಮಿಲಿಯಗಟ್ಟಳೆ ಡಾಲರನ್ನು ಮ್ಯಾನಫೋರ್ಟ್ ತೆರಿಗೆ ಇಲಾಖೆಯಿಂದ ಬಚ್ಚಿಟ್ಟಿದ್ದಾರೆ ಎಂಬ ನಿರ್ಧಾರಕ್ಕೆ ನ್ಯಾಯಾಲಯವೊಂದು ಕಳೆದ ವರ್ಷ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News