×
Ad

ಮಾ.9ಕ್ಕೆ ಕೇಂದ್ರ ಗೃಹ ಸಚಿವರ ಆಗಮನ: ಪೊಲೀಸ್ ಬಂದೋಬಸ್ತ್

Update: 2019-03-08 22:14 IST

ಮಂಗಳೂರು, ಮಾ.8: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಾ.9ರಂದು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸಚಿವರು ಭಾಗವಹಿಸುವ ಕಾರ್ಯಕ್ರಮ ಸ್ಥಳಗಳಾದ ಕೇಂದ್ರ ಮೈದಾನ, ಹೊಟೇಲ್ ಓಶಿಯನ್ ಪರ್ಲ್, ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರವೇ ಆಗಮಿಸಿದ ವಿಶೇಷ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ನಗರದಲ್ಲಿ ಬಂದೋಬಸ್ತ್‌ಗೆ ಎರಡು ಡಿಸಿಪಿ, 16 ಪೊಲೀಸ್ ಇನ್‌ಸ್ಪೆಕ್ಟರ್, 600 ಹೆಡ್ ಕಾನ್‌ಸ್ಟೇಬಲ್/ಕಾನ್‌ಸ್ಟೇಬಲ್, ಐದು ಕೆಎಸ್‌ಆರ್‌ಪಿ, ಆರು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಸಚಿವರು ಸಂಚರಿಸುವ ಸಂದರ್ಭ ರಸ್ತೆ ಸಂಚಾರದಲ್ಲಿ ಸಂಚಾರ ಬದಲಾವಣೆಯಾಗಲಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News