×
Ad

ಮಸೂದ್ ನರ್ಸಿಂಗ್ ಕಾಲೇಜಿನ ಪದವಿ ಪ್ರಧಾನ ಸಮಾರಂಭ

Update: 2019-03-08 22:29 IST

ಮಂಗಳೂರು, ಮಾ.8: ಮಸೂದ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಪದವಿ ಪ್ರದಾನ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ಬಿಎಸ್ಸಿ ಮತ್ತು ಜಿಎನ್‌ಎಂ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಕಾರ್ಯಕ್ರಮ ಮತ್ತು ವಾರ್ಷಿಕ ದಿನಾಚರಣೆಯು ನಗರದ ಪುರಭವನದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ನಳಿನ್‌ಕುಮಾರ್ ಕಟೀಲ್, ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಗೌರವ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾದ ಎ.ಟಿ.ಎಸ್. ಗಿರಿ ಭಾಗವಹಿಸಿದ್ದರು.

ಮಸೂದ್ ಎಜುಕೇಶನ್ ಆ್ಯಂಡ್ ಚಾರೀಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಕಾರ್ಯದರ್ಶಿ ಡಾ.ಮುಹಮ್ಮದ್ ಆರಿಫ್ ಮಸೂದ್, ಖಜಾಂಚಿ ಗುಲ್‌ಶನ್ ಪರ್ವಿನ್, ಟ್ರಸ್ಟಿಯಾದ ಮುಹಮ್ಮದ್ ಆಸಿಫ್ ಮಸೂದ್, ಮಸೂದ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ.ವೀಣಾ ಗ್ರೆಟ್ಟಾ ತೌರೊ, ಉಪಪ್ರಾಂಶುಪಾಲೆ ವಿಜೇತ ಕೊಟ್ಟಾರಿ ಮತ್ತು ಕಾಲೇಜ್ ಆಫ್ ಪಿಸಿಯೋತೆರಪಿಯ ಪ್ರಾಂಶುಪಾಲೆ ಡಾ.ಅನೀಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಸೂದ್ ಎಜುಕೇಶನ್ ಆ್ಯಂಡ್ ಚಾರೀಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮುಹಮ್ಮದ್ ಆರಿಫ್ ಮಸೂದ್ ಸ್ವಾಗತಿಸಿದರು. ಮಸೂದ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ. ವೀಣಾ ಗ್ರೆಟ್ಟಾ ತೌರೋ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News