×
Ad

ಬದ್ರಿಯಾ ಕಾಲೇಜ್ ನಲ್ಲಿ ಮಹಿಳಾ ದಿನಾಚರಣೆ

Update: 2019-03-08 22:41 IST

ಮಂಗಳೂರು, ಮಾ.8: ಮಹಿಳಾ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ನಗರದ ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸೇಫ್ ವುಮನ್, ಸ್ಟ್ರಾಂಗ್ ಕ್ಯಾಂಪಸ್” ಎಂಬ ಘೋಷಣೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷೆ ಮುರ್ಶಿದಾ ಮಹಿಳೆ ದೇಶದ ಗೌರವದ ಆಸ್ತಿಯಾಗಿದ್ದಾಳೆ. ಒಂದು ಮಹಿಳೆಯ ಶಿಕ್ಷಣವು ಸಮಾಜದ ಬೆಳವಣಿಗೆಗೆ ಅಡಿಪಾಯವಾಗಿರುತ್ತದೆ. ಇಂದು ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕಂಡಾಗ ಇದರ ವಿರುದ್ಧ ಮಹಿಳೆಯು ಧ್ವನಿ ಎತ್ತಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಉಪನ್ಯಾಸಕಿ ರಮೀಝಾ, ಜಿಲ್ಲಾ ಕಾರ್ಯದರ್ಶಿ ಸುಹೈನಾ, ಮುಫೀಧಾ, ಸಝ್ರೀನಾ, ಝುಹೈಲಾ ಉಪಸ್ಥಿತರಿದ್ದರು ಹಾಗು ಜಿಲ್ಲಾದ್ಯಂತ ಮಹಿಳಾ ಸಾಧಕರು, ಶಿಕ್ಷಕರು, ಅಧಿಕಾರಿಗಳನ್ನು ಭೇಟಿಯಾಗಿ ಶುಭ ಹಾರೈಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News