×
Ad

ನಡುಪದವು: ಎಸ್ಕೆಎಸ್‍ಎಸ್‍ಎಫ್ ವತಿಯಿಂದ ಅನುಸ್ಮರಣಾ, ಆರೋಗ್ಯ ತಪಾಸಣಾ ಶಿಬಿರ

Update: 2019-03-08 23:18 IST

ಕೊಣಾಜೆ, ಮಾ. 8: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮತ್ತು ಎಸ್ಕೆಎಸ್‍ಎಸ್‍ಎಫ್ ನಡುಪದವು, ಪಟ್ಟೋರಿ ಇದರ ವತಿಯಿಂದ ಶೈಖುನಾ ಮಿತ್ತಬೈಲ್ ಉಸ್ತಾದ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಮಹಾಸಂಗಮ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರವು ಮಾ. 10ರಂದು ನಡೆಯಲಿದೆ.

ಸಯ್ಯಿದ್ ಅಮೀರ್ ತಂಙಳ್ ದುವಾ ನೆರವೇರಿಸಲಿದ್ದು, ಅಲ್ ಹಾಜ್ ಎಂ.ಪಿ. ಮುಹಮ್ಮದ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ ಹಾಜ್ ಶೈಖುನಾ ಎಂ.ಎ.ಖಾಸಿಂ ಮುಸ್ಲಿಯಾರ್ ನೆರವೇರಿಸಲಿದ್ದಾರೆ.

ಅಬೂಬಕ್ಕರ್ ಸಿದ್ದೀಖ್ ಅಝ್‍ಹರಿ ಪಯ್ಯನ್ನೂರ್ ಕೇರಳ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಸಚಿವ ಯು.ಟಿ.ಖಾದರ್ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ನಾಸೀರ್ ಎನ್.ಎ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News