×
Ad

ಮಂಗಳೂರು: ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಿಗೆ ಸನ್ಮಾನ

Update: 2019-03-09 18:30 IST

ಮಂಗಳೂರು, ಮಾ.9: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದ.ಕ.ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ ಅವರನ್ನು ಸಮಸ್ತದ ಕೇಂದ್ರ ಮುಶಾವರ ಸದಸ್ಯ, ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಂಗಳೂರಿನ ಖಾಝಿ ಹೌಸ್‌ನಲ್ಲಿ ಇತ್ತೀಚೆಗೆ ಸನ್ಮಾನಿಸಿದರು.

ಈ ಸಂದರ್ಭ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ರಝಾಕ್ ಹಾಜಿ ಬಿ.ಸಿ.ರೋಡ್, ಕೇಂದ್ರ ಜುಮಾ ಮಸ್ಜಿದ್‌ನ ಖತೀಬ್ ಸ್ವದಖತುಲ್ಲಾ ಫೈಝಿ, ಝಾಕಿರ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News