×
Ad

ಉಡುಪಿಯಲ್ಲಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನ

Update: 2019-03-09 20:02 IST

ಉಡುಪಿ, ಮಾ. 9: ರೇಸಿಂಗ್ ಬೈಕ್ ಗಳ ಬ್ರಾಂಡ್ ಕೆಟಿಎಂ ಇಂಡಿಯಾ ಮತ್ತು ಕೆಟಿಎಂ ಮಣಿಪಾಲ ಇವುಗಳ ಪ್ರಾಯೋಜಕತ್ವದಲ್ಲಿ ಶನಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ಆವರಣದಲ್ಲಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನ ನಡೆಯಿತು.

ಚೆನ್ನೈಯ ಡಿಎಫ್‌ಜಿ ಸ್ಟಂಟ್ ತಂಡದ ವೃತ್ತಿಪರ ಸಾಹಸಿ ಬೈಕ್ ಸವಾರರಾದ ಪಾಂಡ್ಯ ಹಾಗೂ ಆ್ಯಂಡ್ರೊ ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ಮೈನವಿರೇಳಿಸುವಂತೆ 39 ಬಗೆಯ ಬೈಕ್ ಸಾಹಸ ಮತ್ತು ಟ್ರಿಕ್‌ಗಳನ್ನು ಪ್ರದರ್ಶಿಸಿದರು. ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು.

ಈ ಪ್ರದರ್ಶನಕ್ಕೆ ಮಣಿಪಾಲ ಕಾಮತ್ ಮೋಟಾರ್ಸ್‌ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿಘ್ನೇಶ್ ಕಾಮತ್ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ಕೆಟಿಎಂ ಇಂಡಿಯಾದ ನೇಹಾ ಚಂದ್ರಶೇಖರ್ ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ಈವರೆಗೆ ಮಂಗಳೂರು, ತುಮಕೂರು, ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ, ಹಾಸನ, ಧಾರವಾಡ, ಚಿಕ್ಕಮಗಳೂರು, ಗೋಕಾಕ, ಹೊಸಪೇಟೆ, ವಿಜಯಪುರ, ಕೋಲಾರ, ಚೆನ್ನೈ, ಇಂದೋರ್, ಕಂಚಿಪುರ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನು ನಡೆಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News