ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 61ಮಂದಿ ಗೈರು
Update: 2019-03-09 20:40 IST
ಉಡುಪಿ, ಮಾ. 9: ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿಯ ಎರಡು ವಿಷಯಗಳ ಪರೀಕ್ಷೆ ಇಂದು ನಡೆದಿದ್ದು, ಒಟ್ಟು 61 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲಿಟಿಕಲ್ ಸಾಯನ್ಸ್ ಪರೀಕ್ಷೆಗೆ 1706 ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದು, 50 ಮಂದಿ ಗೈರುಹಾಜರಾಗಿ 1656 ಮಂದಿ ಪರೀಕ್ಷೆ ಬರೆದಿದ್ದಾರೆ. ಸಂಖ್ಯಾ ಶಾಸ್ತ್ರ ಪರೀಕ್ಷೆಗೆ 3075 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, 3064 ಮಂದಿ ಪರೀಕ್ಷೆ ಬರೆದು 11 ಮಂದಿ ಗೈರುಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.