ಐಐಟಿ ವಿದ್ಯಾರ್ಥಿಗಳಿಂದ ನಕಲಿ ನೋಟು ಪತ್ತೆಹಚ್ಚುವ ಸಾಧನ ಅಭಿವೃದ್ಧಿ

Update: 2019-03-09 15:33 GMT

ಕೊಲ್ಕತಾ,ಮಾ.9: ಇಲ್ಲಿ ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2019 ಕಾರ್ಯಕ್ರಮದಲ್ಲಿ ಐಐಟಿ ಕರಗ್ಪುರದ ವಿದ್ಯಾರ್ಥಿಗಳು ಧರಿಸಬಹುದಾದ ಸೆನ್ಸರ್‌ಗಳ ಮೂಲಕ ನಕಲಿ ನೋಟು ಪತ್ತೆ ಮತ್ತು ಪರಮಾಣು ವಿಕಿರಣ ಪತ್ತೆಯಂಥ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಐಟಿ ಕರಗ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಆರು ವಿದ್ಯಾರ್ಥಿಗಳ ತಂಡ ನಕಲಿ ಭಾರತೀಯ ನೋಟು ಪತ್ತೆ ಮಾಡಬಲ್ಲ ಸ್ಮಾರ್ಟ್‌ಫೋನ್ ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿದ್ಯಾರ್ಥಿಗಳು ನೋಟಿನ ಭಾವಚಿತ್ರವನ್ನು ಸೆರೆಹಿಡಿದು ಆಮೂಲಕ ನಕಲಿ ನೋಟುಗಳನ್ನು ಪತ್ತೆ ಮಾಡುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಿರುವುದಾಗಿ ಐಐಟಿ ಕರಗ್ಪುರ ಹೇಳಿಕೆಯಲ್ಲಿ ತಿಳಿಸಿದೆ. ಈ ಅಪ್ಲಿಕೇಶನನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡುವ ಮೂಲಕ ನಕಲಿ ನೋಟುಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಐಐಟಿ ಕರಗ್ಪುರದ ವಿದ್ಯಾರ್ಥಿಗಳಾದ ಟಿ.ವೈ.ಎಸ್.ಎಸ್. ಸಂತೋಶ್, ಸತೀಶ್ ಕುಮಾರ್ ರೆಡ್ಡಿ, ವಿಪುಲ್ ತೋಮರ್, ಸಾಯಿಕೃಷ್ಣ, ದೃಷ್ಠಿ ತುಲಸಿ ಮತ್ತು ಡಿ.ವಿ ಸಾಯಿಸೂರ್ಯ ಈ ಆವಿಷ್ಕಾರವನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳು ಮಾಡಿದ ಇನ್ನೊಂದು ಆವಿಷ್ಕಾರದಲ್ಲಿ ಪರಮಾಣು ಚಾಲಿತ ಸಾಧನಗಳ ಸಮೀಪ ಕೆಲಸ ಮಾಡುವ ಜನರ ಔದ್ಯೋಗಿಕ ಅಪಾಯಗಳನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News