×
Ad

5 ಗಿಡ ನೆಟ್ಟರೆ, ಬಂಧನ ವಾರಂಟ್ ರದ್ದು: ಅತ್ಯಾಚಾರ ಆರೋಪಿಗೆ ನ್ಯಾಯಾಲಯ ಸೂಚನೆ

Update: 2019-03-09 21:16 IST

ಗಾಝಿಯಾಬಾದ್,ಮಾ.9: ಐದು ಸಸಿಗಳನ್ನು ನೆಟ್ಟರೆ ಬಂಧನ ವಾರಂಟ್ ರದ್ದು ಮಾಡುವುದಾಗಿ ಗಾಝಿಯಾಬಾದ್ ನ್ಯಾಯಾಲಯ ಅತ್ಯಾಚಾರ ಆರೋಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ತನ್ನ ಆದೇಶವನ್ನು ಪಾಲಿಸಿರುವ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಗಾಝಿಯಾಬಾದ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಸರಕಾರ ನ್ಯಾಯವಾದಿ (ಎಡಿಜಿಸಿ) ರಾಜೀವ್ ಕುಮಾರ್ ತಿಳಿಸಿದ್ದಾರೆ.

ನಾಲ್ಕು ವರ್ಷ ಹಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಿಂದ ವಿಚಾರಣೆಗೆ ಆಗಮಿಸದ ರಾಜು ಅಲಿಯಾಸ್ ಕಲ್ಲು ಎಂಬಾತನ ವಿರುದ್ಧ ವಿಶೇಷ ನ್ಯಾಯಾಧೀಶ ರಾಕೇಶ್ ವಶಿಷ್ಠರ (ಶೀಘ್ರ ವಿಚಾರಣೆ) ಜಾಮೀನುರಹಿತ ವಾರಂಟ್ ಹೊರಡಿಸಿದ್ದರು. ಬಂಧನ ವಾರಂಟನ್ನು ರದ್ದುಗೊಳಿಸುವಂತೆ ಆರೋಪಿ ಗುರುವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದ.

ಈ ಹಿನ್ನೆಲೆಯಲ್ಲಿ ಆದೇಶ ನೀಡಿದ ನ್ಯಾಯಾಲಯ, ಐದು ಗಿಡಗಳನ್ನು ನೆಟ್ಟು ತನ್ನ ಆದೇಶ ಪಾಲಿಸಿದ್ದಕ್ಕೆ ಪ್ರಮಾಣವಾಗಿ ಆಫಿದಾವಿತ್ ಸಲ್ಲಿಸಿದರೆ ಬಂಧನ ವಾರಂಟ್ ರದ್ದುಗೊಳಿಸುವುದಾಗಿ ತಿಳಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News