ಉಡುಪಿ: ಆರ್‌ಟಿಒ ಸೂಚನೆ
Update: 2019-03-09 22:02 IST
ಉಡುಪಿ, ಮಾ. 9: ಸಾರಿಗೆ ಆಯುಕ್ತರ ಆದೇಶದಂತೆ ಮಾ. 6ರಿಂದ ನೊಂದಣಿಯಾಗುವ ದ್ವಿಚಕ್ರ ವಾಹನ ಹಾಗೂ ಅಟೋರಿಕ್ಷಾ ವಾಹನಗಳಿಗೆ 500 ರೂ. ಹಾಗೂ ಲಘು ಮೋಟಾರು ವಾಹನ ಮತ್ತು ಇತರ ವಾಹನಗಳಿಗೆ 1,000 ರೂ. ‘ರಸ್ತೆ ಸುರಕ್ಷತಾ ಕಾರ್ಯಕ್ರಮ ನಿರ್ವಹಣೆ ನಿಧಿ’ ಸಂಗ್ರಹಣೆಗಾಗಿ ಸೆಸ್ ಪಾವತಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.