ಉಡುಪಿ: ಛಾಯಾಚಿತ್ರಗ್ರಾಹಕರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ಉಡುಪಿ, ಮಾ.9: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ವತಿಯಿಂದ ಬೀಡಿನಗುಡ್ಡೆ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದ ಮೈದಾನದಲ್ಲಿ ಆಯೋಜಿಸಲಾದ ಎರಡು ದಿನ ಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಕನ್ನಡಿ ಎದುರು ಕಾಣುವ ನಮ್ಮ ಬಿಂಬ ಕ್ಷಣಿಕ. ಆದರೆ ಛಾಯಾಗ್ರಾಹಕರೆದುರು ನಿಂತಾಗ ಸೆರೆ ಸಿಕ್ಕ ಛಾಯಾಚಿತ್ರ ಮಾತ್ರ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ವಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಅಂಬಲ ಪಾಡಿ ಜನಾರ್ದನ ಮಹಕಾಳಿ ದೇವಳದ ಧರ್ಮದರ್ಶಿ ವಿಜಯ ಬಲ್ಲಾಳ್, ಕಲ್ಮಾಡಿ ಚರ್ಚ್‌ನ ಫಾದರ್ ಅಲ್ಬನ್ ಡಿಸೋಜ ಶುಭ ಹಾರೈಸಿದರು.
ಎಸ್‌ಕೆಪಿಎ ಅಧ್ಯಕ್ಷ ವಿಲ್ಸನ್ ಸಭೆೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ, ಜಿತೇಶ್ ಕಿದಿಯೂರು, ಸುಧಾಕರ್ ಶೆಣ್ಯೆ, ಸೂರಜ್ ಪ್ರಭು, ವಾಸುದೇವ ರಾವ್, ದಯಾನಂದ ಬಂಟ್ವಾಳ, ಸುರಭಿ ರತನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರವಿಣ್ ಕೊರೆಯಾ, ಪ್ರವೀಣ್ ಕುರ್ಕಾಲ್, ತನುಂಜಯ ರಾವ್, ಸುರಭಿ ಸುಧೀರ್, ಜನಾರ್ದನ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.
ಎಸ್‌ಕೆಪಿಎ ಉಪಾಧ್ಯಕ್ಷ ಪ್ರಮೋದ್ ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರವಿಣ್ ಕೊರೆಯಾ ವಂದಿಸಿದರು.