ಪ್ರವಹಿಸಿದ ವಿದ್ಯುತ್: ಪವರ್‌ಮ್ಯಾನ್ ಗಂಭೀರ ಗಾಯ
Update: 2019-03-09 22:44 IST
ಮಂಗಳೂರು, ಮಾ.9: ದುರಸ್ತಿಯ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಪವರ್‌ಮ್ಯಾನ್‌ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಗರದ ಪಳ್ನೀರ್‌ನಲ್ಲಿ ನಡೆದಿದೆ.
ಕೃಷ್ಣಮೂರ್ತಿ ಎಂಬವರು ಗಂಭೀರ ಗಾಯಗೊಂಡ ಪವರ್‌ಮ್ಯಾನ್‌ಆಗಿದ್ದು, ಅವರನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆಸ್ಕಾಂಗೆ ಸಂಬಂಧಿಸಿದ 7-8 ಮಂದಿ ಶನಿವಾರ ನಗರದ ಪಳ್ನೀರ್ ಬಳಿ ಕೆಲಸದಲ್ಲಿ ನಿರತರಾಗಿದ್ದರು. ಆ ಪೈಕಿ ಇಬ್ಬರು ಪವರ್‌ಮ್ಯಾನ್‌ಗಳು ವಿದ್ಯುತ್ ಕಂಬವೇರಿದ್ದರು. ದುರಸ್ತಿಯ ಸಂದರ್ಭ ವಿದ್ಯುತ್ ಪ್ರವಹಿಸಿದ ಪರಿಣಾಮ ಕೃಷ್ಣಮೂರ್ತಿ ಅಲ್ಲೇ ಚಲನ ಕಳೆದುಕೊಂಡರು. ತಕ್ಷಣ ಇತರರು ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.