ಕಾಸರಗೋಡು: ಲೋಕಸಭಾ ಚುನಾವಣಾ ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2019-03-09 17:50 GMT

ಕಾಸರಗೋಡು :   ಲೋಕಸಭಾ  ಚುನಾವಣಾ  ದಿನಾಂಕ  ಮೊದಲೇ  ಸಿಪಿಎಂ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದಿಂದ   ಕೆ.ಪಿ ಸತೀಶ್ಚಂದ್ರನ್  ರಿಗೆ  ಈ ಬಾರಿ  ಟಿಕೆಟ್  ನೀಡಲಾಗಿದೆ.

ಕಳೆದ ಮೂರು ಬಾರಿ ಸಂಸದರಾಗಿದ್ದ ಪಿ . ಕರುಣಾಕರನ್ ರನ್ನು ಈ ಬಾರಿ ಕೈಬಿಡಲಾಗಿದೆ . 2004 , 2009  ಮತ್ತು  2014 ರಲ್ಲಿ ಪಿ . ಕರುಣಾಕರನ್ ಲೋಕಸಭೆಗೆ ಆಯ್ಕೆಯಾಗಿದ್ದರು.

1996  ರಿಂದ 2016 ರ ತನಕ ಎರಡು ಬಾರಿ  ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ  ಆಯ್ಕೆಯಾಗಿದ್ದ ಸತೀಶ್ಚಂದ್ರನ್  , 2008 ರಿಂದ  2018 ರ ತನಕ  ಜಿಲ್ಲಾ ಕಾರ್ಯದರ್ಶಿಯಾಗಿಯೂ  ಸೇವೆ  ಸಲ್ಲಿಸಿದ್ದರು .

ಎಸ್ ಎಫ್ ಐ  ಮೂಲಕ ರಾಜಕೀಯ ಪ್ರವೇಶಿಸಿದ ಸತೀಶ್ಚಂದ್ರನ್ ,  1988 ರಲ್ಲಿ  ಸಿಪಿಎಂ  ಜಿಲ್ಲಾ  ಸಮಿತಿ ಸದಸ್ಯರಾಗಿ ಆಯ್ಕೆಯಾದರು . ಕೆ ಎಸ್  ಕೆ . ಟಿ .ಯು  ಜಿಲ್ಲಾ ಕಾರ್ಯದರ್ಶಿ , ಎಐಕೆಎಸ್  ಕೇಂದ್ರ  ಸಮಿತಿ ಸದಸ್ಯ ರಾಗಿ ಆಯ್ಕೆಯಾಗಿದ್ದರು .

ಕಾಸರಗೋಡು ಸೇರಿದಂತೆ ಎಲ್ಲಾ 20 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು,  ಪಿ . ಕರುಣಾಕರನ್ ಹೊರತು ಪಡಿಸಿ ಉಳಿದ  ಎಲ್ಲಾ  ಹಾಲಿ ಸಿಪಿಎಂ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಆರು ಮಂದಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ . 

ತಿರುವನಂತಪುರ - ಸಿ . ದಿವಾಕರನ್  ( ಸಿಪಿಐ ), ಆಟಿಂಗಲ್ - ಎ  . ಸಂಪತ್  ( ಸಿಪಿಎಂ ), ಕೊಲ್ಲಂ - ಕೆ . ಎನ್  ಬಾಲಗೋಪಾಲ್ ( ಸಿಪಿಎಂ), ಪತ್ತನಂತ್ತಿಟ್ಟ-  ವೀಣಾ  ಜೋರ್ಜ್  ( ಸಿಪಿಎಂ), ಮಾವೆಲಿಕ್ಕರ - ಚಿಟ್ಟಯ  ಗೋಪಕುಮಾರ್  ( ಸಿಪಿಐ ), ಆಲಪ್ಪುಝ - ಎ . ಎಂ  ಆರಿಫ್ (ಸಿಪಿಎಂ ), ಇಡುಕ್ಕಿ - ಜೈಸ್  ಜೋರ್ಜ್  ( ಸಿಪಿಎಂ ಸ್ವತಂತ್ರ ), ಕೋಟಯಂ -  ವಿ . ಎನ್  ವಾಸವನ್ (ಸಿಪಿಎಂ), ಎರ್ನಾಕುಲಂ  - ಪಿ . ರಾಜೀವ್ (ಸಿಪಿಎಂ), ಚಾಲಕ್ಕುಡಿ - ಇನ್ನಸೆಂಟ್ ( ಸಿಪಿಎಂ ಸ್ವತಂತ್ರ ), ತೃಶ್ಯೂರ್ -  ರಾಜಾಜಿ ಮ್ಯಾಥ್ಯೂ  ಥೋಮಸ್  ( ಸಿಪಿಐ ), ಆಲತ್ತೂರು -ಪಿ .ಕೆ  ಬಿಜು (ಸಿಪಿಎಂ ), ಪಾಲಕ್ಕಾಡ್ - ಎಂ . ಬಿ ರಾಜೇಶ್ ( ಸಿಪಿಎಂ ), ಪೊನ್ನಾನಿ - ಎ . ವಿ  ಅನ್ವರ್ ( ಸಿಪಿಎಂ ಸ್ವತಂತ್ರ ), ಮಲಪ್ಪುರಂ - ವಿ . ಪಿ ಸಾನ್  ( ಸಿಪಿಎಂ), ಕೋಜಿಕ್ಕೋಡು - ಎ  ಪ್ರದೀಪ್ ಕುಮಾರ್ ( ಸಿಪಿಎಂ ), ವಡಗರ - ಪಿ . ಜಯರಾಜನ್  ( ಸಿಪಿಎಂ ), ವಯನಾಡು - ಪಿ .ಪಿ  ಸುನೀರ್ ( ಸಿಪಿಐ) 
ಕಣ್ಣೂರು  - ಪಿ . ಕೆ  ಶ್ರೀಮತಿ ( ಸಿಪಿಎಂ ), ಕಾಸರಗೋಡು ಕೆ . ಪಿ  ಸತೀಶ್ಚಂದ್ರನ್ (ಸಿಪಿಎಂ ) ರಿಗೆ ಟಿಕೆಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News