×
Ad

ಮೂಡುಬಿದಿರೆ ಎಂಸಿಎಸ್ ಬ್ಯಾಂಕ್‍ನಲ್ಲಿ ತರಬೇತಿ ಕಾರ್ಯಕ್ರಮ

Update: 2019-03-09 23:44 IST

ಮೂಡುಬಿದಿರೆ: ಕರ್ನಾಟಕ ಸಾಮಾಜಿಕ ಅರಣ್ಯ ದ.ಕ. ಜಿ.ಪಂ.ಮಂಗಳೂರು ಸಾಮಾಜಿಕ ಅರಣ್ಯ ವಲಯದ ವತಿಯಿಂದ  2018-19ನೇ ಸಾಲಿಗೆ  ಸ್ಮ್ಯಾಪ್ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಬಗ್ಗೆ  ತರಬೇತಿ ನೀಡುವ ಕಾರ್ಯಕ್ರಮ ಮೂಡುಬಿದಿರೆ ಎಂಸಿಎಸ್ ಬ್ಯಾಂಕ್ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರದ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್‍ನ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ಜರಗಿತು.

ಮಂಗಳೂರು ವಲಯ ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರಗೌಡ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಂಸಿಎಸ್ ಬ್ಯಾಂಕ್ ಸಿಇಒ ಎಂ. ಚಂದ್ರಶೇಖರ ಹಾಗೂ ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಉಪಾಧ್ಯಕ್ಷೆ ಪ್ಲೋಸಿ ಪಿಂಟೋ  ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿ'ಸೋಜ ಮತ್ತು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ವಿ.ಎಸ್. ಕುಲಕರ್ಣಿ ಅವರು ಪಾಲ್ಗೊಂಡು ಕೃಷಿ ಅರಣ್ಯದ ಮಹತ್ವ ಹಾಗೂ ಅರಣ್ಯದ ವೃಕ್ಷ ದಟ್ಟಣೆ ಹೆಚ್ಚಿಸುವ ನಿಟ್ಟಿನಲ್ಲಿ  ತೆಗೆದುಕೊಳ್ಳಬೇಕಾದ  ಕ್ರಮಗಳು, ಅದಕ್ಕೆ ಸಾಮಾಜಿಕ ಅರಣ್ಯವಿಭಾಗದ ಮೂಲಕ ಲಭಿಸುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಚಿದಾನಂದಪ್ಪ  ಸ್ವಾಗತಿಸಿ ಪ್ರಸ್ತಾವನೆಗೈದರು. ಕೃಷಿ ಅರಣ್ಯಯೋಜನೆಯಡಿ ರೈತರು ತೀರಾ ಸಾಂಕೇತಿಕ ಮೌಲ್ಯತೆತ್ತು ಉಪಯುಕ್ತ ಗಿಡಗಳನ್ನು ಪಡೆದುಕೊಂಡು ನೆಟ್ಟು ಸಾಕಿ, ಮೂರು ವರ್ಷಗಳ ವರೆಗೆ ಪ್ರೋತ್ಸಾಹ ಧನವನ್ನೂ ಪಡೆದುಕೊಳ್ಳಲು ಅವಕಾಶವಿದೆ ಎಂದವರು ಹೇಳಿದರು. ಮೂಡುಬಿದಿರೆ ವಲಯದ ಸುಮಾರು ನೂರು ಮಂದಿ ರೈತರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News