×
Ad

ಹುತಾತ್ಮ ಸೈನಿಕರ ಸ್ಮರಣಾರ್ಥ: ಮುರುಳ್ಯದಲ್ಲಿ ರಕ್ತದಾನ ಶಿಬಿರ

Update: 2019-03-10 20:22 IST

ಪುತ್ತೂರು, ಮಾ. 10: ಪುಲ್ವಾಮ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ  44 ಹುತಾತ್ಮ ಸೈನಿಕರ ಸ್ಮರಣಾರ್ಥವಾಗಿ ಯೂತ್ ಫ್ರೆಂಡ್ಸ್ ಮುರುಳ್ಯ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ರೋಟರಿ ರಕ್ತನಿಧಿ ಪುತ್ತೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮುರುಳ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಲಾಜೆ ನಿವೃತ್ತ ಪ್ರಾಧ್ಯಾಪಕ ವೆಂಕಪ್ಪ ಗೌಡ ಉದ್ಘಾಟಿಸಿ, ರಕ್ತದಾನದ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಎಣ್ಣುರು ಗ್ರಾಮ ಪಂ. ಉಪಾಧ್ಯಕ್ಷ ಕರುಣಾಕರ ಗೌಡ ಹುದೇರಿ, ಪದ್ಮಾವತಿ ಕೆ,ರಫೀಕ್ ನಿಝಾಮಿ, ರಝಾಕ್ ಸಾಲ್ಮರ, ಯೂತ್ ಫ್ರೆಂಡ್ಸ್ ಮುರುಳ್ಯ ತಂಡದ ಧರ್ಮಪಾಲ್ ಕುಲಾಲ್, ಮುಸ್ತಫಾ ಸಮಹಾದಿ, ಹರೀಶ್ ಉದೇರಿ, ಲತೀಫ್ ಮೂಡುಬಿದಿರೆ, ಕಿಶೋರ್ ಕುಮಾರ್ ಬೆದ್ರಳ  ಉಪಸ್ಥಿತರಿದ್ದರು.

ಜಗದೀಶ್ ಹುವೇರಿ ಪ್ರಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News