ಮೆಕ್ಸಿಕೊ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ; 15 ಸಾವು
Update: 2019-03-10 22:18 IST
ಮೆಕ್ಸಿಕೊ ಸಿಟಿ, ಮಾ. 10: ಮೆಕ್ಸಿಕೊ ದೇಶದ ಹಿಂಸಾ ಪೀಡಿತ ಗ್ವಾನಜ್ವಾಟೊ ರಾಜ್ಯದ ನೈಟ್ ಕ್ಲಬ್ ಒಂದರಲ್ಲಿ ಶನಿವಾರ ಮುಂಜಾನೆ ನಡೆದ ಗುಂಡು ಹಾರಾಟದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ.
ಸೂರ್ಯೋದಯದ ಮೊದಲು ಶಸ್ತ್ರಸಜ್ಜಿತ ವ್ಯಕ್ತಿಗಳ ತಂಡವೊಂದು ಮೂರು ವ್ಯಾನ್‌ಗಳಲ್ಲಿ ಸಲಮಂಕ ನಗರದ ಲಾ ಪ್ಲಾಯ ಪುರುಷರ ಕ್ಲಬ್‌ಗೆ ಬಂದಿಳಿಯಿತು. ದುಷ್ಕರ್ಮಿಗಳು ಕ್ಲಬ್‌ನ ಒಳಗೆ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸ್ಥಳೀಯ ಗ್ಯಾಂಗ್ ನಾಯಕ ಜೋಸ್ ಆಂಟೋನಿಯೊ ಯೆಪೆಝ್‌ನನ್ನು ಹಿಡಿಯಲು ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರಿಸ್ ಮ್ಯಾನುಯೆಲ್ ಲೊಪೆಝ್ ಒಬ್ರಡೊರ್ ಈ ವಾರ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.