ಲಂಡನ್: ಭಾರತೀಯ ಹೈಕಮಿಶನ್ ಎದುರು 2 ಗುಂಪುಗಳ ಘರ್ಷಣೆ
Update: 2019-03-10 22:28 IST
ಲಂಡನ್, ಮಾ. 10: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಕಚೇರಿಯ ಹೊರಗೆ ಶನಿವಾರ ಎರಡು ಗುಂಪುಗಳು ಪರಸ್ಪರ ಘರ್ಷಣೆ ನಡೆಸಿದವು.
ಒಂದು ಕಡೆ ಬ್ರಿಟನ್‌ನ ಕಾಶ್ಮೀರಿ ಮತ್ತು ಖಾಲಿಸ್ತಾನ ಪರ ಸಂಘಟನೆಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಭಾರತೀಯ ರಾಯಭಾರ ಕಚೇರಿಯ ಸಮೀಪ ಬಂದರೆ, ಇನ್ನೊಂದು ಕಡೆಯಿಂದ ಮೋದಿ ಪರ ಘೋಷಣೆಗಳನ್ನು ಕೂಗುತ್ತಾ ಇನ್ನೊಂದು ಗುಂಪು ಅಲ್ಲಿಗೆ ಧಾವಿಸಿತು.
ಎರಡು ಗುಂಪುಗಳು ಮುಖಾಮುಖಿಯಾದಾಗ ಪರಸ್ಪರ ಘರ್ಷಣೆ ಸಂಭವಿಸಿತು.
ಹಿಂಸೆಯಲ್ಲಿ ತೊಡಗಿರುವುದಕ್ಕಾಗಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ತಿಳಿಸಿದರು. ಬಳಿಕ ಆ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಘರ್ಷಣೆಯಲ್ಲಿ ಯಾರಿಗೂ ಗಾಯವಾಗಿಲ್ಲ.