ಯುವತಿಯ ಅತ್ಯಾಚಾರ ಪ್ರಕರಣ: ದೂರು ದಾಖಲು
Update: 2019-03-10 22:33 IST
ಮಂಗಳೂರು, ಮಾ.10: ಮದುವೆ ಆಗುವುದಾಗಿ ನಂಬಿಸಿ 20 ವರ್ಷ ಪ್ರಾಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿವಾಹಿತ ಪುರುಷ ಮೂಡುಶೆಡ್ಡೆಯ ಜಗದೀಶ್ (53) ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಜಗದೀಶ್ ತನ್ನ ಸೈಟ್‌ನಲ್ಲಿ ಕೆಲಸಕ್ಕೆ ಬರುತ್ತಿದ್ದ ಉತ್ತರ ಕರ್ನಾಟಕ ಮೂಲದ ಯುವತಿಯನ್ನು ನಂಬಿಸಿ ಈ ಕೃತ್ಯ ಎಸಗಿದ್ದಾಗಿ ಆರೋಪಿಸಲಾಗಿದೆ.
ಆರೋಪಿ ಜಗದೀಶ್ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಗದೀಶ್ ವಿರುದ್ಧ ಅತ್ಯಾಚಾರ (ಐಪಿಸಿ 376) ಆರೋಪ ಮಾತ್ರವಲ್ಲದೆ, ಯುವತಿಗೆ ಬೆದರಿಕೆ ಹಾಕಿದ (ಐಪಿಸಿ 506) ಆರೋಪ ಕೂಡ ಇದ್ದು, ಎರಡೂ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.