×
Ad

ಮಾ.16: ‘ಮಿಸ್ಟರ್ ಕರ್ನಾಟಕ’ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ

Update: 2019-03-11 20:22 IST

ಉಡುಪಿ, ಮಾ.11: ಕರ್ನಾಟಕ ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್ ವತಿ ಯಿಂದ ಮಿಸ್ಟರ್ ಕರ್ನಾಟಕ-2019 ರಾಜ್ಯಮಟ್ಟದ ದೇಹದಾರ್ಢ್ಯ ಚಾಂಪಿ ಯನ್‌ಶಿಪ್ ಮಾ.16ರಂದು ಸಂಜೆ 4ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ಜರಗಲಿದೆ.

ಮಿಸ್ಟರ್ ಕರ್ನಾಟಕ ವಿಜೇತರಿಗೆ 1,11,111ರೂ., ಮೊದಲ ರನ್ನರ್ಸ್‌ ಅಪ್ 55,555ರೂ. ಮತ್ತು ದ್ವಿತೀಯ ರನ್ನರ್ಸ್‌ ಅಪ್ 22,222ರೂ. ನಗದು ಬಹು ಮಾನ ನೀಡಲಾಗುವುದು. ಅದೇ ರೀತಿ ಬೆಸ್ಟ್ ಪೋಸರ್‌ಗೆ 11,111ರೂ. ಬಹುಮಾನ ನೀಡಲಾಗುವುದು ಎಂದು ಸಂಘಟಕ ದೇಹದಾರ್ಢ್ಯಪಟು ರವಿ ರಾಜ್ ಕರ್ಕೇರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಹಿರಿಯ, ಮಾಸ್ಟರ್, ಪುರುಷರು, ಮಹಿಳೆಯರು, ವಿಕಲಚೇತನರ ವಿಭಾಗ ದಲ್ಲಿ ಸ್ಪರ್ಧೆ ನಡೆಯಲಿದ್ದು, ಹಿರಿಯರ 55, 60, 65, 70, 75, 80, 85, 90 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಜರಗಲಿದೆ. 40ರಿಂದ 50, 50ರಿಂದ 60 ಮತ್ತು 60ಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಮಾಸ್ಟರ್ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಸುಮಾರು 150 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಮತಾಶ್ರೀ, ಗೀತಾ ರವಿ ಶೇಟ್, ಧನಂಜಯ ಪೂಜಾರಿ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News