ಮಾ. 31: ಸೌಂದರ್ಯ ಸ್ಪರ್ಧೆಯ ಆಡಿಷನ್
Update: 2019-03-11 20:23 IST
ಉಡುಪಿ, ಮಾ.11: ಜೈ ತುಳುನಾಡು ಪೊರ್ಲು ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮಿಸ್ಟರ್ ಆ್ಯಂಡ್ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯ ಆಡಿಷನ್ ಕಾರ್ಯಕ್ರಮವು ಉಡುಪಿಯಲ್ಲಿ ಮಾ.31ರಂದು ನಡೆಯಲಿದೆ.
ಮಾ.24ರಂದು ಮುಂಬೈ, ಮಾ.25ರಂದು ಪುಣೆಯಲ್ಲೂ ಈ ಸ್ಪರ್ಧೆಯ ಆಡಿಷನ್ ನಡೆಯಲಿದೆ. 18 ರಿಂದ 28 ವರ್ಷದೊಳಗಿನ ಅವಿವಾಹಿತ ತುಳು- ಹಾಗೂ ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಪುಣೆಯಲ್ಲಿ ಮೇ ತಿಂಗಳಿನಲ್ಲಿ ನಡೆಯಲಿದೆ ಎಂದು ಕೊರಿಯೋ ಗ್ರಾಫರ್ ಸಾನಿದ್ದ್ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಅರುಣ್ ಕುಮಾರ್, ಅಧ್ಯಕ್ಷ ಸೂರ್ಯ ಪೂಜಾರಿ, ಉಪಾಧ್ಯಕ್ಷ ಅಜಿತ್ ಶೆಟ್ಟಿ, ಕಿರಣ್ ಕುಮಾರ್, ಬದ್ರು ದ್ದೀನ್ ಉಪಸ್ಥಿತರಿದ್ದರು.