×
Ad

ಸೂರಿಕುಮೇರು: ಪ್ರಯಾಣಿಕರ ತಂಗುದಾಣ ಉದ್ಘಾಟನೆ

Update: 2019-03-11 22:04 IST

ಮಾಣಿ,ಮಾ.11: ಬದ್ರಿಯಾ ಫೌಂಡೇಶನ್ ಸೂರಿಕುಮೇರು ಇದರ ವತಿಯಿಂದ ಸೂರಿಕುಮೇರು ಜಂಕ್ಷನ್ ಬಳಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಬರಿಮಾರು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ರಾಕೇಶ್ ಪ್ರಭು ಹಾಗೂ ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಧರ್ಮಗುರು ಡಿಎಸ್ ಅಬ್ದುರ್ರಹ್ಮಾನ್ ಮದನಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ರಾಮಪ್ಪ ಕುಲಾಲ್ ಸೂರಿಕುಮೇರು, ಪೌಲ್ ಡಯಾಸ್ ಸೂರಿಕುಮೇರು, ರಾಧಾಕೃಷ್ಣ ಶೆಟ್ಟಿ ಸೂರಿಕುಮೇರು, ಮಜೀದ್ ಸೂರಿಕುಮೇರು, ಹನೀಫ್ ಸಂಕ, ಹಸನ್ ಶಾಫಿ ಸೂರಿಕುಮೇರು, ಅಬ್ದುಲ್ ರಶೀದ್ ನೀರಪಾದೆ, ಇರ್ಶಾದ್ ಉಮರ್ ಸೂರಿಕುಮೇರು,ಸಲೀಂ ಮಾಣಿ ಮುಂತಾದವರು ಭಾಗವಹಿಸಿದ್ದರು. ಎಂ ಡಿ ಯಹ್ಯಾ ಬರಿಮಾರು ಕಾರ್ಯಕ್ರಮ ನಿರೂಪಿಸಿ, ಫಾರೂಕ್ ಸತ್ತಿಕಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News