ಅಕ್ರಮ ಮದ್ಯ ಮಾರಾಟ: ಓರ್ವ ಸೆರೆ

Update: 2019-03-11 16:58 GMT

ಕುಂದಾಪುರ, ಮಾ.11: ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಗುಡಿಬೆಟ್ಟು ಕ್ರಾಸ್ ಜಂಕ್ಷನ್ ಬಳಿ ಮಾ.11ರಂದು ಅಪರಾಹ್ನ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮುಳ್ಳುಗುಡ್ಡೆ ಕರಣಿಕರಬೆಟ್ಟುವಿನ ಭಾಸ್ಕರ ಗಾಣಿಗ(64) ಬಂಧಿತ ಆರೋಪಿ. ಈತನಿಂದ ಒಟ್ಟು 849ರೂ. ಮೌಲ್ಯದ ಮದ್ಯದ ಬಾಟಲಿ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News