ಮಣಿಪಾಲದಲ್ಲಿ ಎಸ್‌ಬಿಐ ವೆಲ್ತ್ ಹಬ್ ಉದ್ಘಾಟನೆ

Update: 2019-03-11 17:01 GMT

ಮಣಿಪಾಲ, ಮಾ.11: ದೇಶದ ಅತಿದೊಡ್ಡ ಸಾರ್ವಜನಿಕರಂಗದ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಣಿಪಾಲದಲ್ಲಿ ಪ್ರಾರಂಭಿ ಸಿರುವ 110ನೇ ಎಸ್‌ಬಿಐ ವೆಲ್ತ್ ಹಬ್‌ನ್ನು ರವಿವಾರ ಬ್ಯಾಂಕಿನ ಮುಂಬಯಿ ಕಾರ್ಪೋರೇಟ್ ಸೆಂಟರ್‌ನ ಡಿಎಂಡಿ (ಐಬಿಜಿ) ಸಿ.ವೆಂಕಟ್ ನಾಗೇಶ್ವರ್ ಉದ್ಘಾಟಿಸಿದರು.

ರಾಜ್ಯದಲ್ಲಿ ತೆರೆಯುತ್ತಿರುವ ಮೂರನೇ ವೆಲ್ತ್ ಹಬ್ ಇದಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಈಗಾಗಲೇ ಎಸ್‌ಬಿಐ ವೆಲ್ತ್ ಹಬ್ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ ಎಂದವರು ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕ ರಂಗದಲ್ಲಿರುವ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ, ಸಮಗ್ರ ವೆಲ್ತ್ ಮ್ಯಾನೇಜ್‌ಮೆಂಟ್ ವ್ಯವಹಾರ ಪ್ರಾರಂಭಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದವರು ನುಡಿದರು. ದೇಶದಲ್ಲಿ ತೆರೆದಿರುವ 110ನೇ ಎಸ್‌ಬಿಐ ವೆಲ್ತ್ ಹಬ್ ಇದಾಗಿದ್ದು, 2020ರ ವೇಳೆ ದೇಶದಲ್ಲಿ 55 ಎಸ್‌ಬಿಐ ವೆಲ್ತ್ ಸೆಂಟರ್‌ಗಳನ್ನು ತೆರೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಉಡುಪಿ ಹಾಗೂ ಮಣಿಪಾಲ ಪ್ರದೇಶ ಬ್ಯಾಂಕಿಂಗ್ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಈ ಭಾಗದಲ್ಲಿ ವೆಲ್ತ್ ಮ್ಯಾನೇಜ್‌ಮೆಂಟ್‌ಗೆ ವಿಶೇಷ ಬೇಡಿಕೆ ಬರಬಹುದೆಂಬ ನಿರೀಕ್ಷೆಯಲ್ಲಿ ಇಲ್ಲಿ ವೆಲ್ತ್ ಹಬ್‌ನ್ನು ತೆರೆಯಲಾಗಿದೆ ಎಂದು ನಾಗೇಶ್ವರ ತಿಳಿಸಿದರು.

ಗ್ರಾಹಕರಿಗೆ ಹಣಕಾಸು ವ್ಯವಹಾರಗಳ ಕುರಿತಂತೆ ಸರಿಯಾದ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಈ ಶಾಖೆಯ ಮೂಲಕ ನೀಡಲಾಗುತ್ತದೆ. ದೇಶದಲ್ಲಿ ಈಗಾಗಲೇ 50,000 ಗ್ರಾಹಕರನ್ನು ಹೊಂದಿದ್ದು, 2020ರ ವೇಳೆ ಈ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಎಸ್‌ಬಿಐ ವೆಲ್ತ್ ಈಗಾಗಲೇ 35 ಪ್ರಮುಖ ನಗರಗಳಲ್ಲಿ ಕಾರ್ಯಾಚರಿ ಸುತ್ತಿದೆ. 110 ವೆಲ್ತ್ ಹಬ್‌ಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ.ವ್ಯವಹಾರದ ಗುರಿಯನ್ನು ಹೊಂದಲಾಗಿದೆ ಎಂದರು.

ಬೆಂಗಳೂರು ವೃತ್ತದ ಸಿಜಿಎಂ ಅಭಿಜಿತ್ ಮುಜುಂದಾರ್ ಹಾಗೂ ಮುಂಬಯಿಯ ಸಿಜಿಎಂ ಗಿರಿಧರ್ ಕಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News