ಮುದ್ರಾಡಿ ರಂಗೋತ್ಸವದಲ್ಲಿ ಮಾದ್ಯಮ ಸಮ್ಮಾನ
Update: 2019-03-12 18:20 IST
ಹೆಬ್ರಿ, ಮಾ.12: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ 5ನೇ ದಿನದಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಅವರಿಗೆ ಮಾಧ್ಯಮ ಸಮ್ಮಾನ ನೀಡಲಾಯಿತು.
ನಮ ತುಳವೆರ್ ಕಲಾ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರದ ನಾಟಕ ನಿರ್ದೇಶಕ ಅಭಿಜಿತ್ ಜುಂಜಾ ರಾವ್, ಸುಗಂಧಿ ಮೋಹನ್, ವಾಣಿ ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನಮ ತುಳುವೆರ್ ಕಲಾ ಸಂಘಟನೆಯ ಕಾರ್ಯದರ್ಶಿ ಜಗದೀಶ್ ಜಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಸುಕುಮಾರ್ ಮೋಹನ್ ವಂದಿಸಿದರು. ಬಳಿಕ ಅಭಿಜಿತ್ ಜುಂಜಾರಾವ್ ನಿರ್ದೇಶನದ ಮಹಾರಾಷ್ಟ್ರ ತಂಡದ ಯುರೇಕಾ! ಯುರೇಕಾ!! ಎಂಬ ಮರಾಠಿ ನಾಟಕ ಹಾಗೂ ತಮಿಳು ನಾಡಿನ ಜಾನಪದ ನೃತ್ಯ ಪ್ರದರ್ಶನ ನಡೆಯಿತು.