×
Ad

ಕುಂಬ್ರ ಎಸ್ಸೆಸ್ಸೆಫ್‍ನಿಂದ ರಕ್ತದಾನ ಶಿಬಿರ

Update: 2019-03-12 18:50 IST

ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಸಮಿತಿ ಹಾಗೂ  ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.

ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಶಿಬಿರವನ್ನು ಉದ್ಘಾಟಿಸಿದರು. ಜಿಲ್ಲಾ ವಕ್ಫ್  ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ  ಮಾತನಾಡಿದರು.

ಸರ್ವೆ ಕಲ್ಪಣೆ ಪ್ರೌಢಶಾಲಾ ಕಾರ್ಯಾಧ್ಯಕ್ಷ ಕರುಣಾಕರ ಗೌಡ ಎಲಿಯ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ನ್ಯಾಯವಾದಿ ದುರ್ಗಾ ಪ್ರಸಾದ್ ರೈ, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಹಾಜಿ ಮೇರ್ಲ, ಕುಂಬ್ರ ವರ್ತಕ ಸಂಘದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಎಸ್.ಎಂ ಬಶೀರ್ ಹಾಜಿ, ಎಸ್.ಪಿ ಬಶೀರ್ ಶೇಖಮಲೆ, ಆಶಿಕುದ್ದೀನ್ ಅಖ್ತರ್ ಕುಂಬ್ರ, ಅಲಿ ಸಅದಿ ಬಲ್ಕಾಡ್, ಅಶ್ರಫ್ ಉಜಿರೋಡಿ, ಉಮಾ ಮಹೇಶ್ವರ, ಉಸ್ಮಾನ್ ಮುಸ್ಲಿಯಾರ್ ಶಾಂತಿನಡಿ, ರವೂಫ್ ಮನ್ನಾಫ್, ಎ.ಆರ್ ಇಬ್ರಾಹಿಂ,ಎಸ್ಸೆಸ್ಸೆಫ್ ಅಧ್ಯಕ್ಷ  ನೌಶಾದ್ ಸಅದಿ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು. 

ಎಸ್ಸೆಸ್ಸೆಫ್ ತಾಲೂಕು ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಅಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News