×
Ad

ಲೋಕಸಭಾ ಚುನಾವಣೆ: ಭಟ್ಕಳದಲ್ಲಿ ಚುರುಕುಗೊಂಡ ವಾಹನ ತಪಾಸಣೆ

Update: 2019-03-12 19:01 IST

ಭಟ್ಕಳ, ಮಾ. 12: ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಗೊರ್ಟೆ ಬಳಿಯಲ್ಲಿ ವಾಹನ ತಪಾಸಣೆ ಚುರುಕಾಗಿದ್ದು ತಹಶೀಲ್ದಾರ್ ಎನ್.ಬಿ. ಪಾಟೀಲ್ ನೇತೃತ್ವದಲ್ಲಿ  ಹಿರಿಯ ಅಧಿಕಾರಿಗಳ ತಂಡ ತಪಾಸಣೆ ಆರಂಬಿಸಿದೆ.

ಕುಂದಾಪುರ ಕಡೆಯಿಂದ ಆಗಮಿಸುವ ಕಾರು, ಜೀಪು, ಟೆಂಪೊ ಟ್ರಾವೆಲರ್ ಸೇರಿದಂತೆ ನಾಲ್ಕು ಚಕ್ರವಾಹನಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ವಾಹನಗಳನ್ನು ಪರೀಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಎಲ್ಲಿಂದ ಬಂದಿದ್ದೀರಿ ಎಲ್ಲಿಗೆ ಹೋಗುತ್ತಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

ವಾಹನ ಢಿಕ್ಕಿಯನ್ನು ತೆರದು ತಪಾಸಣೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದ ಹಣ, ಹೊಸ ವಸ್ತ್ರಗಳ ಪೊಟ್ಟಣ ಹೀಗೆ ಎಲ್ಲವನ್ನು ವಿಚಾರಿಸುತ್ತಿರುವುದನ್ನು ಗಮನಿಸುತ್ತಿರುವ ಸಾರ್ವಜನಿಕರು ಚುನಾವಣೆ ಇಲಾಖೆಯ ಕಟ್ಟುನಿಟ್ಟಿನ ಕ್ರಮದ ಕುರಿತು ಮಾತನಾಡಿಕೊಳ್ಳುತ್ತಿರುವದು ಕಂಡು ಬಂದಿದೆ. 

ಕುಂಟವಾಣಿ, ಶಿರಾಲಿ, ಸರ್ಪನಕಟ್ಟೆಗಳಲ್ಲೂ ಚೆಕ್ ಪೋಸ್ಟ ತನಿಖೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ ಸಲ್ಮಾನ್ ಖಾನ್, ವಿಶ್ವನಾಥ ಗಾಂವಕರ್, ನಗರಠಾಣೆ ಪಿಎಸ್‍ಐ ರವಿ, ಎಸ್‍ಐ ನವೀನ ಬೋರ್ಕರ  ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News