×
Ad

ಕೈ ಚಿಹ್ನೆ ನಮ್ಮ ಅಭ್ಯರ್ಥಿ: ಸಚಿವ ಯು.ಟಿ. ಖಾದರ್

Update: 2019-03-12 19:25 IST

ಉಳ್ಳಾಲ, ಮಾ. 12: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರ ಮತ್ತು ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವು ರವಿವಾರ ಉಸ್ಮಾನ್ ಕಲ್ಲಾಪು ಅವರ ನೇತೃತ್ವದಲ್ಲಿ ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ನಡೆಯಿತು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್‍ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ ನಾಯಕರನ್ನು ಸಚಿವ ಯು.ಟಿ.ಖಾದರ್ ಸನ್ಮಾನಿಸಿ ನಂತರ ಮಾತನಾಡಿದ ಅವರು ಕೈ ಚಿಹ್ನೆ ನಮ್ಮ ಅಭ್ಯರ್ಥಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಆಹಾರ ಜಾಗೃತಿ ಸಮಿತಿ ನಿರ್ದೇಶಕ ಟಿ.ಎಸ್. ಅಬ್ದುಲ್ಲಾ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಗಣೇಶ್ ಪೂಜಾರಿ, ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಯು.ಬಿ. ಸಲೀಂ, ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಎನ್.ಎಸ್.ಕರೀಂ, ಖಾಲಿದ್ ಉಜಿರೆ,  ಎಂ.ಜಿ.ಹೆಗ್ಡೆ, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಕುಂಞಿಮೋನು, ರಮೇಶ್ ಶೆಟ್ಟಿ ಬೋಳಿಯಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸೀರ್ ಸಾಮಣಿಗೆ, ಸಿದ್ದೀಕ್ ಪಾರೆ, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘ, ಲತೀಫ್ ಕಂದಕ್, ತಾಲೂಕು ಪಂ. ಸದಸ್ಯರಾದ ಜಬ್ಬಾರ್ ಬೋಳಿಯಾರ್, ಸಿದ್ದೀಕ್ ತಲಪಾಡಿ, ಸುರೇಖ ಚಂದ್ರಹಾಸ, ಒಲ್ವಿನ್, ಉಳ್ಳಾಲ ಪುರಸಭೆ ಸದಸ್ಯರಾದ ಮಹಮ್ಮದ್ ಮುಕ್ಕಚ್ಚೇರಿ, ಅಯ್ಯೂಬ್ ಇಸ್ಮಾಯಿಲ್, ಬಾಜಿಲ್ ಡಿಸೋಜ, ಮಾಜಿ ಸದಸ್ಯ ಮುಸ್ತಫಾ ಅಬ್ದುಲ್ಲಾ, ಸುರೇಶ್ ಭಟ್ನಗರ, ಉಸ್ಮಾನ್ ಕಲ್ಲಾಪು, ರಫೀಕ್, ಮಹಮ್ಮದ್ ಅಸೈ, ಟಿ.ಎಸ್.ಅಬೂಬಕರ್, ಯೂಸುಫ್ ಬಾವ, ಜಾಫರ್, ರಿಯಾಝ್ ಮಲಾರ್, ಪ್ರಧಾನ ಕಾರ್ಯದರ್ಶಿ ಸಾದಿಕ್ ಕಲ್ಲಾಪು, ಪದ್ಮನಾಭ ಮುಟ್ಟಿಂಜ, ಸುಲೈಮಾನ್ ಪಿ.ಎಸ್, ಜಮೀಲ್ ಮೊಂಟೆಪದವು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News