ಪಿಎನ್ ಬಿ ಹಗರಣ: ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ನೀರವ್ ಮೋದಿ ಪತ್ನಿ ಹೆಸರು

Update: 2019-03-12 15:18 GMT

ಮುಂಬೈ, ಮಾ. 12: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ಪತ್ನಿ ಆ್ಯಮಿಯನ್ನು ಆರೋಪಿಯನ್ನಾಗಿ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ ಸೋಮವಾರ ಹೆಸರಿಸಿದೆ.

ತನ್ನ ಇತ್ತೀಚೆಗಿನ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ, ಆ್ಯಮಿ ಸರಿಸುಮಾರು 209 ಕೋಟಿ ರೂಪಾಯಿ ರವಾನಿಸಲು ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಬಳಸಿದ್ದಾರೆ ಎಂದು ಆರೋಪಿಸಿದೆ. ಹಣ ವಂಚನೆಯಲ್ಲಿ ಅವರ ಪಾತ್ರವನ್ನು ನಾವು ಸಾಬೀತುಪಡಿಸಿದ್ದೇವೆ. ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈಯ ಬ್ರಾಡಿ ಹೌಸ್ ಶಾಖೆ ನೀಡಿದ ನಕಲಿ ಖಾತ್ರಿ ಪತ್ರ ಬಳಸಿ ನಿಧಿ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾದ ಆ್ಯಮಿ ವಿರುದ್ಧ ಜಾರಿ ನಿರ್ದೇಶನಾಲಯ ಅಂತರಾಷ್ಟ್ರೀಯ ಬಂಧನಾದೇಶ-ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಿದೆ. ಕಳೆದ ವಾರ ಇಂಗ್ಲೆಂಡ್‌ನ ಪತ್ರಿಕೆ ‘ದಿ ಡೈಲಿ ಟೆಲಿಗ್ರಾಫ್’ ಪ್ರಕಟಿಸಿದ ವರದಿ ನೀರವ್ ಮೋದಿ ಲಂಡನ್‌ನ ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಬಹಿರಂಗಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News