×
Ad

ಚುನಾವಣೆ: ಕರಪತ್ರ, ಪೋಸ್ಟರ್ ಮುದ್ರಣಕ್ಕೆ ಸೂಚನೆ

Update: 2019-03-12 20:55 IST

ಉಡುಪಿ, ಮಾ.12: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಕಲಂ 127(ಎ)(1) ರ ಪ್ರಕಾರ ಚುನಾವಣೆಗೆ ಸಂಬಂಧಿಸಿದ ಕರಪತ್ರ, ಭಿತ್ತಿಪತ್ರ ಮುಂತಾದ ವುಗಳನ್ನು ಮುದ್ರಿಸಿದಲ್ಲಿ ಅವುಗಳ ಕೆಳಗೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಿರಬೇಕು, ಅಲ್ಲದೇ ಅದರ ಒಂದು ಪ್ರತಿಯನ್ನು ಪ್ರಕಾಶಕರ ಘೋಷಣೆಯೊಂದಿಗೆ ಪ್ರಜಾಪ್ರಾತಿನಿಧ್ಯ ಕಾಯ್ದೆ ಕಲಂ 127ಎ(2) ರ ಪ್ರಕಾರ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಕೂಡಲೇ ಸಲ್ಲಿಸಬೇಕು.

ಇದಕ್ಕೆ ತಪ್ಪಿದಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಕಲಂ 127(ಎ)(4) ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News