×
Ad

100 ಕೋ. ರೂ. ತೆರಿಗೆ ವಂಚನೆ: ಮಾಯಾವತಿ ಮಾಜಿ ಕಾರ್ಯದರ್ಶಿ ಸಂಕೀರ್ಣಗಳ ಮೇಲೆ ದಾಳಿ

Update: 2019-03-12 21:03 IST

ಹೊಸದಿಲ್ಲಿ, ಮಾ. 12: ರೂಪಾಯಿ 100 ಕೋಟಿ ತೆರಿಗೆ ವಂಚಿಸಿದ ಆರೋಪದಲ್ಲಿ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ಮಾಜಿ ಕಾರ್ಯದರ್ಶಿಯ ಸಂಕೀರ್ಣಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಕ್ನೋ ಹಾಗೂ ದಿಲ್ಲಿಯ 12 ಸ್ಥಳಗಳಲ್ಲಿ ದಾಳಿ ನಡೆಯಿತು. ‘‘ನೇತ್ರಂ ಅಪಾರ ಸಂಪತ್ತು ಹೊಂದಿದ್ದಾರೆ ಹಾಗೂ ನೂರಾರು ಕೋಟಿ ತೆರಿಗೆ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.’’ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 2007 ಹಾಗೂ 2012 ನಡುವೆ ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ನೇತ್ರಂ ಅವರಿಗೆ ನಿಕಟರಾಗಿದ್ದರು. ಅವರು ಮಾಯಾವತಿ ಅವರ ಆಡಳಿತದ ಐದು ವರ್ಷಗಳ ಕಾಲ ಪ್ರಾಥರ್ಮಿಕ ಕಾರ್ಯದಶಿಯಾಗಿದ್ದರು.

ನೇತ್ರಂ ಕೃಷಿ ಇಲಾಖೆಯಲ್ಲಿ ಪ್ರಾಥಮಿಕ ಕಾರ್ಯದರ್ಶಿ ಹಾಗೂ ಕಂದಾಯ, ಕಬ್ಬು, ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಮುಖ್ಯಸ್ಥರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News