×
Ad

ಮಂಗಳೂರು: ಬಿಗ್ ಬಝಾರ್‌ನಲ್ಲಿ ವಿಶೇಷ ಎಕ್ಸ್‌ಚೇಂಜ್ ಮೇಳ

Update: 2019-03-12 21:51 IST

ಮಂಗಳೂರು, ಮಾ.12: ನಗರದ ಅತ್ತಾವರ ಮತ್ತು ಬಿಜೈ ಬಿಗ್ ಬಝಾರ್‌ ಮಳಿಗೆಗಳಲ್ಲಿ ಫೆ.16ರಿಂದ ಮಾ. 24ರವರೆಗೆ ‘ದಿ ಗ್ರೇಟ್ ಎಕ್ಸಚೇಂಜ್ ಮೇಳ’ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಗ್ರಾಹಕರು ಹಳೆಯ ವಸ್ತುಗಳನ್ನು ತಂದುಕೊಟ್ಟು ಅದರ ಮೇಲೆ ಬಿಗ್ ಬಝಾರ್‌ನ ಎಕ್ಸ್ ಚೇಂಜ್ ಕೂಪನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಳೆಯ ನ್ಯೂಸ್ ಪೇಪರ್ 1 ಕೆ.ಜಿ.ಗೆ 50ರೂ., ಹಳೆಯ ಪಾತ್ರೆಗಳು 300 ರೂ., ಪ್ಲಾಸ್ಟಿಕ್‌ಗಳು ಕೆ.ಜಿ.ಗೆ 100 ರೂ. ಹಾಗೂ ಹಳೆಯ ಇಲೆಕ್ಟ್ರಾನಿಕ್ಸ್‌ಗಳ ಮೇಲೆ 5,000 ರೂ. ತನಕ ವಿನಿಮಯ ಮಾಡಿ ಕೊಳ್ಳಲಾಗುವುದು.

ಗ್ರಾಹಕರು ಗೃಹಬಳಕೆಯ ಕಿಚನ್ವೇರ್, ಹೊಮ್‌ವೇರ್, ಬೆಡ್‌ಶೀಟ್, ಕ್ರೀಡಾ ವಸ್ತುಗಳು, ಮಕ್ಕಳ ಆಟಿಕೆಗಳು ಮತ್ತು ಲಗೇಜ್ ವಿಭಾಗಗಳಲ್ಲಿ ಎಕ್ಸ್‌ಚೇಂಜ್ ಕೂಪನ್ ಮೂಲಕ ಹೆಚ್ಚುವರಿಯಾಗಿ ಶೇ.20 ಹಾಗೂ ದಿನನಿತ್ಯದ ಆಹಾರ ಸಾಮಗ್ರಿಗಳು, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಶೇ.10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಏರ್ ಕಂಡಿಷನ್ ಹಾಗೂ 39 ಇಂಚು ಮತ್ತು ಮೇಲ್ಪಟ್ಟು ಇರುವ ಎಲ್‌ಇಡಿ ಟಿವಿಗಳ ಮೇಲೆ ಹೆಚ್ಚುವರಿಯಾಗಿ ಶೇ.20 (5,000 ರೂ.ವರೆಗೆ) ಫ್ಯೂಚರ್ ಪೇ ಮೂಲಕ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಬುಧವಾರದ ಬಿಗ್ ಬಝಾರ್‌ ಪ್ರಯುಕ್ತ ಆಯ್ದ ಶ್ರೇಣಿಯ ಜ್ಯೂಸ್‌ಗಳ ಮೇಲೆ ಒಂದು ಕೊಂಡರೆ ಒಂದು ಉಚಿತ, ಪ್ರತಿ ಕೆಜಿ ದ್ರಾಕ್ಷಿಗೆ 49 ರೂ., ಪ್ರತಿ ಒಂದು ಕಿವಿ ಫ್ರೂಟ್‌ಗೆ 14 ರೂ., ಪ್ರತಿ ಕೆಜಿ ‘ಕ್ಯಾರೆಟ್ ಇಂಗ್ಲಿಷ್’ಗೆ 19 ರೂ. ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News