×
Ad

ಬಂಟ್ವಾಳ: ಲಾರಿ ಚಾಲಕನಿಗೆ ಅಪರಿಚಿತ ಯುವಕರಿಂದ ಹಲ್ಲೆ ; ದೂರು

Update: 2019-03-12 22:35 IST

ಬಂಟ್ವಾಳ, ಮಾ. 12: ಲಾರಿ ಚಾಲಕನೋರ್ವನಿಗೆ ಪರಿಚಿತ ಯುವಕರಿಬ್ಬರು ಥಳಿಸಿ, ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಒಕ್ಕೆತ್ತೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಒಕ್ಕೆತ್ತೂರು ನಿವಾಸಿ, ಲಾರಿ ಚಾಲಕ ವಿನ್ಸಿ ಲೋಬೋ ಯಾನೆ ವಿನ್ಸೆಂಟ್ (46) ಹಲ್ಲೆಗೊಳಗಾದ ವ್ಯಕ್ತಿ. ಸೋಮವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಒಕ್ಕೆತ್ತೂರು ಜಂಕ್ಷನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಡ್ಡಗಟ್ಟಿದ ಯುವಕರಿಬ್ಬರು, ಅವಾಚ್ಯ ಶಬ್ದಗಳಿಂದ ಬೈದು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಿನ್ಸಿ ಲೋಬೋ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ವಿನ್ಸೆಂಟ್ ತಲೆಗೆ ಗಂಭೀರ ಗಾಯವಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News