ವಾಯು ಮಾಲಿನ್ಯದಿಂದಲೂ ಮಧುಮೇಹ: ಹೊಸ ಸಂಶೋಧನೆ ಏನು ಹೇಳುತ್ತದೆ ನೋಡಿ…

Update: 2019-03-12 17:09 GMT

ಬೀಜಿಂಗ್, ಮಾ. 12: ಪ್ರಧಾನ ವಾಯು ಮಾಲಿನ್ಯಕಾರಕ ‘ಪಿಎಂ2.5’ನ್ನು ದೀರ್ಘಕಾಲ ಸೇವಿಸಿದರೆ ಮಧುಮೇಹಕ್ಕೆ ಒಳಗಾಗುವ ಅಪಾಯ ಹೆಚ್ಚುತ್ತದೆ ಎಂದು ಚೀನಾದಲ್ಲಿ ನಡೆಸಲಾದ ಅಂತರ್‌ರಾಷ್ಟ್ರೀಯ ಅಧ್ಯಯನದಲ್ಲಿ ಪತ್ತೆಯಾಗಿದೆ.

ವಾಯುಮಾಲಿನ್ಯಕ್ಕೆ ದೀರ್ಘ ಕಾಲ ಮಾನವ ದೇಹ ಒಡ್ಡಲ್ಪಟ್ಟರೆ ಮಧುಮೇಹ ಕಾಯಿಲೆಗೆ ಒಳಗಾಗುವ ಸಾಧ್ಯತೆ 15.7 ಶೇಕಡದಷ್ಟು ಹೆಚ್ಚುತ್ತದೆ ಎನ್ನುವುದು ಚೀನಾದಲ್ಲಿ ದಶಕಕ್ಕೂ ಅಧಿಕ ಅವಧಿಯಲ್ಲಿ ನಡೆಸಲಾದ ಬೃಹತ್ ಪ್ರಮಾಣದ ಅಧ್ಯಯನದಿಂದ ತಿಳಿದುಬಂದಿದೆ.

‘‘ಪಿಎಂ2.5 ಕಣಗಳ ವ್ಯತಿರಿಕ್ತ ಪರಿಣಾಮಗಳು ಮಕ್ಕಳಿಂದ ಮಧ್ಯವಯಸ್ಕರವರೆಗಿನವರಲ್ಲಿ, ಮಹಿಳೆಯರಲ್ಲಿ, ಹೊಗೆಬತ್ತಿ ಸೇವನೆ ಮಾಡದವರಲ್ಲಿ ಮತ್ತು ಕಡಿಮೆ ದೇಹತೂಕ ಹೊಂದಿರುವವರಲ್ಲಿ ಅತಿ ಹೆಚ್ಚು’’ ಎಂದು ಸಂಶೋಧನೆ ತಿಳಿಸಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಮಧುಮೇಹಿಗಳು ಚೀನಾದಲ್ಲಿದ್ದಾರೆ.

ಚೀನಾದ ಗಾಳಿಯಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಪಿಎಂ2.5 ಕಣಗಳ ಸಾಂದ್ರತೆ ಗರಿಷ್ಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News