ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ‘ಬಂಡಾಯ’: ರಘುರಾಮ ರಾಜನ್ ಎಚ್ಚರಿಕೆ

Update: 2019-03-12 17:13 GMT

ಲಂಡನ್,ಮಾ.12: ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯು,ವಿಶೇಷವಾಗಿ 2008ರ ಜಾಗತಿಕ ಆರ್ಥಿಕ ಹಿಂಜರಿಕೆಯ ಬಳಿಕ ಜನರ ಅಗತ್ಯಗಳ ಪೂರೈಕೆಯನ್ನು ಸ್ಥಗಿತಗೊಳಿಸಿರುವುದರಿಂದ ಬಂಡವಾಳಶಾಹಿಯು ಬಂಡಾಯದ ಗಂಭೀರ ಬೆದರಿಕೆಯನ್ನೆದುರಿಸುತ್ತಿದೆ ಎಂದು ಮಾಜಿ ಆರ್‌ಬಿಐ ಗವರ್ನರ್ ಹಾಗೂ ಹಾಲಿ ಚಿಕಾಗೋ ವಿವಿಯಲ್ಲಿ ಪ್ರೊಫೆಸರ್ ಆಗಿರುವ ರಘುರಾಮ ರಾಜನ್ ಅವರು ಮಂಗಳವಾರ ಇಲ್ಲಿ ಎಚ್ಚರಿಕೆ ನೀಡಿದರು.

ಆರ್ಥಿಕತೆಯನ್ನು ಪರಿಗಣಿಸಿದಾಗ ಸಾಮಾಜಿಕ ಅಸಮಾನತೆಯನ್ನು ವಿಶ್ವಾದ್ಯಂತದ ಸರಕಾರಗಳು ಕಡೆಗಣಿಸಲು ಸಾಧ್ಯವಿಲ್ಲ ಎಂದು ಬಿಬಿಸಿ ರೇಡಿಯೊ 4ನ ಟುಡೇಸ್ ಪ್ರೋಗ್ರಾಮ್‌ನಲ್ಲಿ ಮಾತನಾಡುತ್ತ ಹೇಳಿದ ಅವರು, ಬಂಡವಾಳಶಾಹಿಯು ಜನರ ಅಗತ್ಯಗಳನ್ನು ಒದಗಿಸುವುದನ್ನು ನಿಲ್ಲಿಸಿದೆ ಮತ್ತು ಇದು ಸಂಭವಿಸಿದಾಗ ಹಲವರು ಅದರ ವಿರುದ್ಧ ಬಂಡೇಳುತ್ತಾರೆ. ಹೀಗಾಗಿ ಬಂಡವಾಳಶಾಹಿಯು ಗಂಭೀರ ಬೆದರಿಕೆಯಲ್ಲಿದೆ ಎಂದು ತಾನು ಭಾವಿಸಿದ್ದೇನೆ ಎಂದರು.

ಬಂಡವಾಳಶಾಹಿಯು ಸಮಾನ ಅವಕಾಶಗಳನ್ನು ಒದಗಿಸುತ್ತಿಲ್ಲವಾದ್ದರಿಂದ ಅದು ಕುಸಿಯುತ್ತಿದೆ ಎಂದು ತಾನು ನಂಬಿದ್ದೇನೆ. ವಾಸ್ತವದಲ್ಲಿ ಅದರಿಂದ ನಲುಗುತ್ತಿರುವವರು ಇನ್ನೂ ಕೆಟ್ಟ ಸ್ಥಿತಿಯಲ್ಲಿದ್ದಾರೆ ಎಂದ ಅವರು, ಎಲ್ಲ ಉತ್ಪಾದನಾ ಮಾರ್ಗಗಳ ಸಮಾಜೀಕರಣವು ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡಿಕೊಡುತ್ತದೆ. ಸಮತೋಲನವೊಂದರ ಅಗತ್ಯವಿದೆ. ನೀವು ನಿಮ್ಮದೇ ಆಯ್ಕೆಯನ್ನು ಮಾಡಿಕೊಳ್ಳುವಂತಿಲ್ಲ. ನೀವು ಅವಕಾಶಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News