×
Ad

ಮಾ.15ರಂದು ಕನ್ನಂಗಾರ್ ಬೈಪಾಸ್‍ನಲ್ಲಿ ಸ್ವಲಾತ್ ಮಜ್ಲಿಸ್

Update: 2019-03-12 22:49 IST

ಪಡುಬಿದ್ರಿ: ಜಮಾಲಿಯ್ಯಾ ಮಸ್ಜಿದ್ ಕನ್ನಂಗಾರ್ ಬೈಪಾಸ್ ಇದರ ವತಿಯಿಂದ ಸ್ವಲಾತ್ ಮಜ್ಲಿಸ್ ಅಂಗವಾಗಿ ಮಾ.15ರಂದು ಧಾರ್ಮಿಕ ಮತಪ್ರವಚನ ಹಾಗೂ ಮಾ.16ರಂದು ಸ್ವಲಾತ್ ಮಜ್ಲಿಸ್ ನಡೆಯಲಿದೆ.

ಮಾ. 15ರಂದು ರಾತ್ರಿ 8.30ಕ್ಕೆ ಉಡುಪಿ ಖಾಝಿ ಅಲ್‍ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉಸ್ತಾದ್ ಉದ್ಘಾಟಿಸಲಿದಾರೆ. ಮಸ್‍ಊದ್ ಸಖಾಫು ಗೂಡಲ್ಲೂರು ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಮಾ.16ರಂದು ಸ್ವಲಾತ್ ಮಜ್ಲಿಸ್ ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ. ಸ್ವಲಾತ್ ನೇತೃತ್ವವನ್ನು ಶಿಹಾಬುದ್ದೀನ್ ಅಲ್‍ಹೈದ್ರೋಸಿ ತಂಙಳ್ ಕಿಲ್ಲೂರು ವಹಿಸಲಿದ್ದಾರೆ.

ಕನ್ನಂಗಾರ್ ಜುಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ ಉದ್ಘಾಟಿಸಲಿದ್ದಾರೆ. ಜಮಾಲಿಯ್ಯಾ ಮಸೀದಿ ಅಧ್ಯಕ್ಷ ಯು.ಕೆ. ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News