ನಡುಪದವು: ಉಚಿತ ಆರೋಗ್ಯ ತಪಸಣಾ ಶಿಬಿರ ಉದ್ಘಾಟನೆ
ಕೊಣಾಜೆ, ಜ. 12: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್, ಎಸ್ಕೆಎಸ್ಸೆಸ್ಸೆಫ್ ನಡುಪದವು ಪಟ್ಟೋರಿ ಹಾಗೂ ಯು.ಟಿ.ಫರೀದ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಕಣಚೂರು ಮೆಡಿಕಲ್ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡುಪದವಿನ ಪಿ.ಎ.ಕಾಲೇಜು ಕ್ಯಾಂಪಸ್‍ನಲ್ಲಿ ನಡೆಯಿತು.
ಇಸ್ಲಾಮಿಕ್ ಸೆಂಟರ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ನಡುಪದವು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗಾಗಿ ಸಂಘಟನೆಗಳು ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು ಈ ನಿಟ್ಟಿನಲ್ಲಿ ನಡುಪದವಿನಲ್ಲಿ ಪರಿಸರದ ಎಲ್ಲರಿಗೂ ಅನುಕೂಲವಾಗುವಂತೆ ಉಚಿತ ಆರೊಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮವನ್ನು ಅಲ್ ಹಾಜ್ ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿಯವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ, ಹಾಜಿ. ಎಚ್.ಅಬ್ದುಲ್ ಖಾದರ್, ಎಸ್ಸಿಲರ್ ವಿಷನ್ ಐ ಫೌಂಡೇಶನ್ ಐ ಪೌಂಡೇಶನ್ ಇದರ ಹಿರಿಯ ವ್ಯವಸ್ಥಾಪಕರಾದ ಧರ್ಮ ಪ್ರಸಾದ್ ರೈ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ರೋಹಿತ್ , ಪಂಚಾಯಿತಿ ಸದಸ್ಯರಾದ ಎನ್.ಎಸ್. ನಾಸೀರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ಹಾಜಿ.ಕೆ.ಕೆ ಅಬ್ದುಲ್ ನಾಸೀರ್, ತಾಲೂಕು ಪಂ. ಸದಸ್ಯರಾದ ಹೈದರ್ ಕೈರಂಗಳ, ಇಬ್ರಾಹಿಂ ಕೊಣಾಜೆ, ಇಸ್ಮಾಯಲಿ ಹಾಜಿ ಮೂಲೆ, ಸಿ.ಐ.ಬಾವ ಹಾಜಿ ನಡುಪದವು, ಖಾದರ್, ಇಬ್ರಾಹಿಂ ಹಾಜಿ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಸಿ.ಎಂ.ಶೆರೀಫ್ ಪಟ್ಟೋರಿ ಸ್ವಾಗತಿಸಿ, ಶಬೀರ್ ನಡುಪದವು ವಂದಿಸಿದರು.