ಗೂರ್ಖಾ ರೈಫಲ್ಸ್‌ನ ಹೊಸ ಬೆಟಾಲಿಯನ್ ಸ್ಥಾಪನೆಗೆ ಬ್ರಿಟನ್ ನಿರ್ಧಾರ

Update: 2019-03-12 17:27 GMT

ಲಂಡನ್, ಮಾ. 12: ‘ರಾಯಲ್ ಗೂರ್ಖಾ ರೈಫಲ್ಸ್’ನ ಹೊಸ ಬೆಟಾಲಿಯನ್ ಒಂದನ್ನು ಸ್ಥಾಪಿಸುವ ಯೋಜನೆಯೊಂದನ್ನು ಬ್ರಿಟನ್‌ನ ತೆರೇಸಾ ಮೇ ಸರಕಾರ ಸೋಮವಾರ ಪ್ರಕಟಿಸಿದೆ.

‘ರಾಯಲ್ ಗೂರ್ಖಾ ರೈಫಲ್ಸ್’ ಈಸ್ಟ್ ಇಂಡಿಯಾ ಕಂಪೆನಿಯ ಕಾಲದಲ್ಲೇ ಅಸ್ತಿತ್ವಕ್ಕೆ ಬಂದಿತ್ತು ಹಾಗೂ ಅದು ಎರಡು ಮಹಾಯುದ್ಧಗಳು ಹಾಗೂ ಇತರ ಹಲವಾರು ಸಮಕಾಲೀನ ಯುದ್ಧಗಳಲ್ಲಿ ಪಾಲ್ಗೊಂಡಿತ್ತು.

ರಾಯಲ್ ಗೂರ್ಖಾ ರೈಫಲ್ಸ್‌ನ ಮೂರನೇ ಬೆಟಾಲಿಯನನ್ನು ಪರಿಣತ ಪದಾತಿ ದಳದ ಬೆಟಾಲಿಯನ್ ಆಗಿ ಸ್ಥಾಪಿಸಲಾಗುವುದು ಹಾಗೂ ಈ ವರ್ಷದ ಅದಕ್ಕಾನಿ ನೇಮಕಾತಿಯನ್ನು ನಡೆಸಲಿದ್ದೇವೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಘೋಷಿಸಿದೆ. ಎಲ್ಲ ಗೂರ್ಖಾ ಸೈನಿಕರ ನೇಮಕಾತಿಯನ್ನು ನೇಪಾಳದಲ್ಲಿ ಮಾಡಲಾಗುವುದು.

ವಿಶೇಷ ಪರಿಣತಿ ಪಡೆದ ಐದು ಪದಾತಿ ಬೆಟಾಲಿಯನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ನೂತನ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಅದರ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News