×
Ad

ಸಾಮಾಜಿಕ ಮಾಧ್ಯಮಗಳು ಶೇ.4-5ರಷ್ಟು ಮತಗಳ ಮೇಲೆ ಪ್ರಭಾವ ಬೀರಬಹುದು

Update: 2019-03-12 23:10 IST

ಹೈದರಾಬಾದ್,ಮಾ.12: ಸಾಮಾಜಿಕ ಮಾಧ್ಯಮಗಳು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಶೇ.4ರಿಂದ ಶೇ.5ರಷ್ಟು ಮತಗಳ ಮೇಲೆ ಪ್ರಭಾವ ಬೀರಬಹುದು,ಹೀಗಾಗಿ ಅತಿ ಕಡಿಮೆ ಗೆಲುವಿನ ಅಂತರ ಹೊಂದಿರುವ ಕ್ಷೇತ್ರಗಳಲ್ಲಿ ಅವು ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ.ಮೋಹನದಾಸ್ ಪೈ ಅವರು ಮಂಗಳವಾರ ಹೇಳಿದರು.

ಯುವಜನರು,ವಿಶೇಷವಾಗಿ ಮೊದಲ ಬಾರಿಯ ಮತದಾರರು ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ನೆಚ್ಚಿಕೊಂಡಿದ್ದಾರೆ ಮತ್ತು ಹೆಚ್ಚಿನವರ ಪಾಲಿಗೆ ಈ ಮಾಧ್ಯಮಗಳು ಪ್ರಮುಖ ಮಾಹಿತಿ ಮೂಲಗಳಾಗಿವೆ. ಶೇ.40ರಿಂದ ಶೇ.50ರಷ್ಟು ಯುವ ಮತದಾರರ ಮತದಾನದ ಮೇಲೆ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರಬಹುದು ಎಂದು ಸುದ್ದಿಸಂಸ್ಥೆಯೊಡನೆ ಮಾತನಾಡಿದ ಪೈ ನುಡಿದರು.

ಯುವ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯಾವುದು ಅವರನ್ನು ಪ್ರೇರೇಪಿಸುತ್ತದೆ,ಅವರಲ್ಲಿರುವ ಭಾವನೆಗಳೇನು ಮತ್ತು ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವುದನ್ನು ರಾಜಕೀಯ ಪಕ್ಷಗಳು ತಿಳಿದುಕೊಳ್ಳಬೇಕು. ಸಂದೇಶಗಳು ಅವರ ಆಸಕ್ತಿಗಳನ್ನು ಆಧರಿಸಿರಬೇಕು. ಸಂದೇಶಗಳು ಒಂದು ಗುಂಪಾಗಿ ಗುರಿಯಾಗಿಸಿಕೊಳ್ಳಬೇಕು. ಸಂದೇಶಗಳು ಉಜ್ವಲ ಭವಿಷ್ಯದ ಬಗ್ಗೆ ಧನಾತ್ಮಕವಾಗಿರಬೇಕು ಮತ್ತು ಆಶಾವಾದಿಯಾಗಿರಬೇಕು ಎಂದು ಪೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News