ಮುಸ್ಲಿಮ್ ‘ತರಬೇತಿ’ ಶಿಬಿರಗಳು ನಿಧಾನವಾಗಿ ಮಾಯ: ಚೀನಾ

Update: 2019-03-12 17:59 GMT

ಬೀಜಿಂಗ್, ಮಾ. 12: ಚೀನಾದಲ್ಲಿರುವ ಅತಿ ಭದ್ರತೆಯ ಮುಸ್ಲಿಮರ ಬಂಧನ ಶಿಬಿರಗಳು ನಿಧಾನವಾಗಿ ಮರೆಯಾಗುತ್ತವೆ ಎಂದು ಚೀನಾದ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಈ ಬಂಧನ ಶಿಬಿರಗಳನ್ನು ಚೀನಾ ‘ವೃತ್ತಿ ತರಬೇತಿ ಕೇಂದ್ರ’ಗಳೆಂದು ಕರೆಯುತ್ತದೆ.

‘‘ಇಂಥ ಶಿಬಿರಗಳ ಅಗತ್ಯ ಸಮಾಜಕ್ಕಿಲ್ಲ ಎಂಬ ಕಾಲ ಬಂದಾಗ ಈ ಶಿಬಿರಗಳು ಮರೆಯಾಗುತ್ತವೆ’’ ಎಂದು ಚೀನಾ ಸಂಸತ್ತಿನ ವಾರ್ಷಿಕ ಸಮಾವೇಶದ ನೇಪಥ್ಯದಲ್ಲಿ ಮಾತನಾಡಿದ ಕ್ಸಿನ್‌ಜಿಯಾಂಗ್ ರಾಜ್ಯದ ರಾಜ್ಯಪಾಲ ಶೊಹ್ರಟ್ ಝಾಕಿರ್ ಹೇಳಿದರು.

ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಇಂಥ ಶಿಬಿರಗಳಲ್ಲಿ ರಾಜಕೀಯ ಸಿದ್ಧಾಂತಗಳನ್ನು ಬೋಧಿಸಲಾಗುತ್ತಿದೆ ಹಾಗೂ ಅಲ್ಲಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬುದಾಗಿ ಮಾಜಿ ಶಿಬಿರಾರ್ಥಿಗಳು ಹೇಳಿದ ಬಳಿಕ ಈ ಬಗ್ಗೆ ಅಂತರ್‌ರಾಷ್ಟ್ರೀಯ ಟೀಕೆಗಳು ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News