ವೆನೆಝುವೆಲದಲ್ಲಿ ಉಳಿದ ಸಿಬ್ಬಂದಿಯನ್ನು ಹಿಂದೆ ಪಡೆಯಲು ಅಮೆರಿಕ ನಿರ್ಧಾರ

Update: 2019-03-12 18:01 GMT

ವಾಶಿಂಗ್ಟನ್, ಮಾ. 12: ವೆನೆಝುವೆಲದಲ್ಲಿನ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿ ಉಳಿದಿರುವ ರಾಜತಾಂತ್ರಿಕ ಸಿಬ್ಬಂದಿಯನ್ನು ಅಮೆರಿಕ ಹಿಂದಕ್ಕೆ ಕರೆಸಿಕೊಳ್ಳಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ.

‘‘ವೆನೆಝುವೆಲದಲ್ಲಿನ ಹದಗೆಡುತ್ತಿರುವ ಪರಿಸ್ಥಿತಿ ಹಾಗೂ ರಾಜಧಾನಿ ಕ್ಯಾರಕಸ್‌ನಲ್ಲಿ ಉಳಿದಿರುವ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿಯು ಅಮೆರಿಕದ ನೀತಿಯನ್ನು ನಿರ್ಬಂಧಿಸುತ್ತದೆ ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಪಾಂಪಿಯೊ ಟ್ವೀಟ್ ಮಾಡಿದ್ದಾರೆ.

ತುರ್ತು ಕೆಲಸಗಳಿಗೆ ಸಂಬಂಧಪಡದ ಅಮೆರಿಕ ಎಲ್ಲ ಉದ್ಯೋಗಿಗಳು ವೆನೆಝುವೆಲದಿಂದ ಹೊರಡಬೇಕು ಎಂಬುದಾಗಿ ಜನವರಿ 24ರಂದು ಅಮೆರಿಕ ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News