ವಿಟಿಯು ಪರೀಕ್ಷಾ ಫಲಿತಾಂಶ: ಸಹ್ಯಾದ್ರಿ ಕಾಲೇಜಿಗೆ ಪ್ರಥಮ ಸಹಿತ ಐದು ರ‍್ಯಾಂಕ್

Update: 2019-03-13 11:23 GMT

ಮಂಗಳೂರು, ಮಾ.13: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು)ದ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಇದರಲ್ಲಿ ಸಹ್ಯಾದ್ರಿ ಕಾಲೇಜು ಪ್ರಥಮ ರ್ಯಾಂಕ್‌ನೊಂದಿಗೆ ಐದು ರ್ಯಾಂಕ್‌ಗಳನ್ನು ಗಳಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಶ್ರೀನಿವಾಸ ರಾವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ಪವಿತ್ರೀ ಬಿ. ಶೆಟ್ಟಿ ಬಿಇ ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದು, ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಈಕೆ 2017-18ರ ವಿಟಿಯು ಬ್ಯಾಚ್‌ ನ 15,919 ಇಂಜಿನಿಯರ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಚಿನ್ನದ ಪದಕಗಳನ್ನೂ ಪಡೆದಿದ್ದಾರೆ ಎಂದವರು ತಿಳಿಸಿದರು.

ಬಿಇ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ತುತಿ ಕೆ.ಎ. ಕಾಂಕ್ರಿಟ್ ಟೆಕ್ನಾಲಜಿ ವಿಷಯದಲ್ಲಿ ಅತ್ಯದಿಕ ಅಂಕಗಳನ್ನು ಗಳಿಸಿದ್ದು, ಅಲ್ಟ್ರಾಟೆಕ್ ಗೋಲ್ಡ್ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ. ಮಣಿಕಂಠ ಪಿ.ವಿ. ತೃತೀಯ ರ್ಯಾಂಕ್(ಎಂ.ಟೆಕ್ -ಸಿವಿಎಲ್ ಸಿಎಡಿಎಸ್) ಅನುಶಾ ಕೆ. 6ನೇ ರ್ಯಾಂಕ್(ಎಂ.ಟೆಕ್-ಸಿವಿಎಲ್ ಸಿಎಡಿಎಸ್) ಆಥ್ಮೀಯ ಎಚ್.ಪಿ. 5ನೇ ರ್ಯಾಂಕ್ (ಎಂಬಿಎ) ಮತ್ತು ವರುಣ್ ಕೆ. 10ನೇ ರ್ಯಾಂಕ್(ಎಂಬಿಎ) ಗಳಿಸಿದ್ದಾರೆ ಎಂದವರು ವಿವರಿಸಿದರು.

ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ವಿಟಿಯು ಚಾನ್ಸೆಲರ್ ಸಮ್ಮುಖದಲ್ಲಿ ಮಾ.18ರಂದು ವಿಟಿಯು ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ರ್ಯಾಂಕುಗಳು ಬಂದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುವುದಾಗಿ ಪ್ರೊ.ಶ್ರೀನಿವಾಸ ರಾವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ.ವಿಶಾಲ್ ಸಮರ್ಥ, ಡಾ.ಸುಧೀರ್ ಶೆಟ್ಟಿ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಪವಿತ್ರೀ ಬಿ. ಶೆಟ್ಟಿ, ಮಣಿಕಂಠ ಪಿ.ವಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News