ಮಹಿಳೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ ದೋಚಿದ ಹಣ ವಾಪಸ್ ನೀಡಿದ ಕಳ್ಳ !

Update: 2019-03-13 11:06 GMT

ಬೀಜಿಂಗ್, ಮಾ.13: ಮಹಿಳೆಯೊಬ್ಬಳಿಗೆ ಚೂರಿ ತೋರಿಸಿ ಬೆದರಿಸಿ ಆಕೆಯಿಂದ ಸೆಳೆದ ಹಣವನ್ನು ನಂತರ ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಕಳ್ಳನೊಬ್ಬ ಹಿಂದಿರುಗಿಸಿದ ವಿಚಿತ್ರ ಹಾಗೂ ಕುತೂಹಲಕಾರಿ ವಿದ್ಯಮಾನ ಚೀನದಲ್ಲಿ ನಡೆದಿದೆ. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು ಅದರ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಹಾಗೂ ವೈರಲ್ ಆಗಿದೆ.

ಹೆಯುವಾನ್ ನಗರದ ಲೀ ಎಂಬ ಹೆಸರಿನ ಮಹಿಳೆ ಎಟಿಎಂ ಒಂದರಿಂದ ಹಣ ಪಡೆಯುತ್ತಿರುವುದು ಐಸಿಬಿಸಿ ಬ್ಯಾಂಕಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಗ ಕಳ್ಳನೋರ್ವ ಚೂರಿ ಝಳಪಿಸುತ್ತಾ ಆಕೆಯ ಹಿಂದಿನಿಂದ ಬಂದು ಬೆದರಿಸುತ್ತಿದ್ದಂತೆಯೇ ಆಕೆ ತನ್ನ ಬಳಿಯಿದ್ದ 2,500 ಯುವಾನ್ ಹಣವನ್ನು ಆತನ ಕೈಗೆ ನೀಡುತ್ತಾಳೆ. ಆಗ ಕಳ್ಳ ಆಕೆಯ ಅಕೌಂಟ್ ಬ್ಯಾಲೆನ್ಸ್ ನೋಡಬೇಕೆಂದು ಹೇಳುತ್ತಾನೆ. ಅದರಂತೆ ಬ್ಯಾಂಕ್ ಬ್ಯಾಲೆನ್ಸ್ ನೋಡಿದಾಗ ಆಕೆಯ ಬಳಿ ಇನ್ನೇನು ಹಣ ಉಳಿದಿಲ್ಲ ಎಂದು ತಿಳಿದಾಗ ನಗುತ್ತಾ ಹಣ ವಾಪಸ್ ನೀಡಿ ಅಲ್ಲಿಂದ ತೆರಳುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಆದರೆ ಕಳ್ಳನ ಈ ಔದಾರ್ಯ  ಆತನನ್ನು ಬಚಾವ್ ಮಾಡಿಲ್ಲ. ಪೊಲೀಸರು ನಂತರ ಆತನನ್ನು ಬಂಧಿಸಿದ್ದಾರೆ.
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News